ಕೇವಲ 2 ನಿಮಿಷ ಮಾತಾಡಿದೆ, ಭಾರತ ದ್ವಿಚಕ್ರ ವಾಹನದ ತೆರಿಗೆ ಇಳಿಸಿತು: ಟ್ರಂಪ್

ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿದ್ದು ಭಾಗಶಃ ಉತ್ತಮವಾದದ್ದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ವಿಸ್ಕಿ ಮೇಲೆ ಹೆಚ್ಚಿನ ತೆರಿಗೆ....

Published: 25th January 2019 12:00 PM  |   Last Updated: 25th January 2019 12:04 PM   |  A+A-


Got India to cut tariff on motorcycles to 50% just by talking for about 2 minutes: Trump

ಕೇವಲ 2 ನಿಮಿಷ ಮಾತಾಡಿದೆ ಭಾರತ ದ್ವಿಚಕ್ರ ವಾಹನದ ತೆರಿಗೆ ಇಳಿಸಿತು: ಟ್ರಂಪ್

Posted By : SBV SBV
Source : Online Desk
ವಾಷಿಂಗ್ ಟನ್: ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿದ್ದು ಭಾಗಶಃ ಉತ್ತಮವಾದದ್ದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ವಿಸ್ಕಿ ಮೇಲೆ ಹೆಚ್ಚಿನ ತೆರಿಗೆ ವಿಧಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ರೆಸಿಪ್ರೊಕಲ್ ಟ್ರೇಡ್ ಆಕ್ಟ್ ಕುರಿತು ಶ್ವೇತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ದ್ವಿಚಕ್ರವಾಹನಗಳ ಆಮದಿಗೆ ಶೇ.100 ರಷ್ಟು ತೆರಿಗೆ ವಿಧಿಸಿತ್ತು. ಆದರೆ ನಾನು ಕೇವಲ 2 ನಿಮಿಷಗಳಲ್ಲಿ ಅದನ್ನು ಶೇ.50ಕ್ಕೆ ಇಳಿಸಿದೆ. ಈಗ ಅಮೆರಿಕಾದಲ್ಲಿ ಅದು ಶೇ.50vs ಶೇ.2.4 ಆಗಿದೆ. ಇಷ್ಟಾದರೂ ಅದು ಭಾಗಶಃ ಸಮಾಧಾನಕರವಾದ ಒಪ್ಪಂದ ಎಂದು ಹೇಳಿದ್ದಾರೆ. 

ಇದೇ ವೇಳೆ ಭಾರತ ಆಮದುಮಾಡಿಕೊಳ್ಳುವ ವೈನ್ ಮೇಲಿನ ಆಮದು ಸುಂಕದ ಬಗ್ಗೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದು,  ಮದ್ಯದ ಆಮದಿನ ಮೇಲೆ ಭಾರತ ಅತಿ ಹೆಚ್ಚು ತೆರಿಗೆ ವಿಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮದ್ಯದ ಆಮದು ಮೇಲಿನ ಸುಂಕ ಶೇ.150 ರಷ್ಟಿದ್ದರೆ ನಮಗೆ ಏನೂ ಸಿಗುವುದಿಲ್ಲ ಎಂದು ಹೇಳಿದ್ದಾರೆ. 

ಭಾರತ ಕಳೆದ ಫ್ರೆಬ್ರವರಿಯಲ್ಲಿ ಹಾರ್ಲೆ ಡೇವಿಡ್ ಸನ್ ಸೇರಿದಂತೆ ಆಮದುಮಾಡಿಕೊಳ್ಳಲಾಗುವ ದ್ವಿಚಕ್ರವಾಹನಗಳ ಮೇಲಿನ ಆಮದು ಸುಂಕವನ್ನು ಶೇ.100 ರಿಂದ ಶೇ.50 ರಷ್ಟು ಇಳಿಕೆ ಮಾಡಿತ್ತು. 
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp