ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ, ಪೆಟ್ರೋಲ್ ದರದಲ್ಲಿ ಬದಲಾವಣೆ ಇಲ್ಲ; ಇಂದಿನ ದರ ಪಟ್ಟಿ ಇಲ್ಲಿದೆ

ಸತತ ಮೂರನೇ ದಿನವೂ ಪೆಟ್ರೋಲ್ ದರ ಯಥಾ ಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್ ದರದಲ್ಲಿ ಶುಕ್ರವಾರ 10 ಪೈಸೆಯಷ್ಟು ಹೆಚ್ಚಳವಾಗಿದೆ.

Published: 25th January 2019 12:00 PM  |   Last Updated: 25th January 2019 02:44 AM   |  A+A-


Petrol prices remain unchanged for third day, diesel becomes costlier. Check rates here

ಸಂಗ್ರಹ ಚಿತ್ರ

Posted By : SVN SVN
Source : Online Desk
ಮುಂಬೈ: ಸತತ ಮೂರನೇ ದಿನವೂ ಪೆಟ್ರೋಲ್ ದರ ಯಥಾ ಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್ ದರದಲ್ಲಿ ಶುಕ್ರವಾರ 10 ಪೈಸೆಯಷ್ಟು ಹೆಚ್ಚಳವಾಗಿದೆ.

ದೈನಂದಿನ ತೈಲ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್ ಗೆ 73.61 ರೂ ಇದ್ದು, ಪ್ರತೀ ಲೀಟರ್ ಡೀಸೆಲ್‌ ದರ 68.07 ರೂ. ಗೆ ಏರಿಕೆಯಾಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.27 ರೂ. ಮತ್ತು ಡೀಸೆಲ್‌ ದರ 66 ರೂ. ಗಳಿಗೇರಿಕೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 73.99 ರೂ. ಮತ್ತು ಡೀಸೆಲ್‌ ದರ 69.62 ರೂ. ಇದ್ದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 73.36 ರೂ. ಮತ್ತು ಡೀಸೆಲ್‌ ದರ 67.78 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ದರ 76.90 ರೂ. ಮತ್ತು ಡೀಸೆಲ್‌ ದರ 69.11 ರೂ. ಇದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ರೂ. 3798ಕ್ಕೆ ತಲುಪಿದೆ. 
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp