ಆನ್ ಲೈನ್ ಮೂಲಕ ವ್ಯವಹರಿಸುವ ಗ್ರಾಹಕರ ಮಾಹಿತಿಗೆ ಭದ್ರತೆ ಒದಗಿಸದ ಎಸ್'ಬಿಐ
ಆನ್ ಲೈನ್ ಮೂಲಕ ವ್ಯವಹರಿಸುವ ಗ್ರಾಹಕರ ಮಾಹಿತಿಗೆ ಭದ್ರತೆ ಒದಗಿಸದ ಎಸ್'ಬಿಐ

ಆನ್ ಲೈನ್ ಮೂಲಕ ವ್ಯವಹರಿಸುವ ಗ್ರಾಹಕರ ಮಾಹಿತಿಗೆ ಭದ್ರತೆ ಒದಗಿಸದ ಎಸ್'ಬಿಐ: ವರದಿ

ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರ ಬ್ಯಾಂಕಿಂಗ್ ಮಾಹಿತಿಗಳಿರುವ ಸರ್ವರ್ ಗೆ ಭದ್ರತೆ ಒದಗಿಸದೆ ಲಕ್ಷಗಟ್ಟಲೆ ಗ್ರಾಹಕರನ್ನು....
ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರ ಬ್ಯಾಂಕಿಂಗ್ ಮಾಹಿತಿಗಳಿರುವ ಸರ್ವರ್ ಗೆ ಭದ್ರತೆ ಒದಗಿಸದೆ ಲಕ್ಷಗಟ್ಟಲೆ ಗ್ರಾಹಕರನ್ನು ಅಪಾಯಕ್ಕೊಡ್ಡಿತ್ತು ಎನ್ನಲಾಗಿದೆ. ಇದೇ ವೇಳೆ ಈ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗುತ್ತಲೇ ಬ್ಯಾಂಕ್ ಆ ನಿರ್ದಿಷ್ಟ ಸರ್ವರ್ ಗೆ ಭದ್ರತೆ ಒದಗಿಸುವ ಕ್ರಮ ಕೈಗೊಂಡಿದೆ ಎಂದೂ ಹೇಳಲಾಗಿದೆ.
"ಟೆಕ್ ಕ್ರೆಅಂಚ್" ಸಂಸ್ಥೆಯ ವರದಿಯಂತೆ ಬ್ಯಾಂಕ್ ನ ಅಸುರಕ್ಷಿತ ಸರ್ವರ್ ಮುಂಬೈ ಕೇಂದ್ರದಲ್ಲಿತ್ತು.ಎಸ್ ಬಿಐ ಕ್ವಿಕ್ ಎಂಬ ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆಗಳ ಮಾಹಿತಿ ಅದರಲ್ಲಿತ್ತು.ಇದರ ಮೂಲಕ ಗ್ರಾಹಕರು ತಮ್ಮ ಖಾತಾ ವಿವರ, ಚೆಕ್ ಪುಸ್ತಕಕ್ಕಾಗಿನ ಮನವಿ ಸೇರಿ ಹಲವು ಸೇವೆಗಳನ್ನು ಪಡೆಯುತ್ತಿದ್ದರು.
ಈ ಸರ್ವರ್ ಗೆ ಯಾವುದೇ ಪಾಸ್ ವರ್ಡ್ ರಕ್ಷಣೆ ಇರಲಿಲ್ಲ, ಲಕ್ಷ ಸಂಖ್ಯೆಯ ಗ್ರಾಹಕರ ಬ್ಯಾಂಕಿಂಗ್ ಮಾಹಿತಿ, ಮೊಬೈಲ್ ಸಂಖ್ಯೆ ಸೇರಿ ಇತ್ತೀಚಿನ ಅವರ ಬ್ಯಾಂಕಿಂಗ್ ವ್ಯವಹಾರದ ವಿವರ ಸಹ ಇದರಲ್ಲಿತ್ತು. ಇದನ್ನು ಸೆಕ್ಯೂರಿಟಿ ಸಂಶೋಧಕರೊಬ್ಬರು ಪತ್ತೆ ಮಾಡಿದ್ದಾರೆ.
ಟೆಕ್ ಕ್ರೆಅಂಚ್" ಪ್ರಕಾರ ಸೋಮವಾರದಂದು ಒಂದೇ ದಿನ ಬ್ಯಾಂಕ್ ಇದೇ ಸರ್ವರ್ ಮೂಲಕ ೩೦ ಲಕ್ಷಕ್ಕೆ ಮಿಕ್ಕು ಟೆಕ್ಸ್ಟ್ ಸಂದೇಶ ರವಾನಿಸಿದೆ. ಹೀಗಿದ್ದಲ್ಲಿ ಲ:ಎದೆರಡು ತಿಂಗಳಿನಲ್ಲಿ ಅದೆಷ್ಟು ಸಂದೇಶ ರವಾನೆಯಾಗಿದೆ ಎನ್ನುವುದುಅನ್ನು ನಾವು ಊಹಿಸಬಹುದು.

Related Stories

No stories found.

Advertisement

X
Kannada Prabha
www.kannadaprabha.com