ಭಾರತದ ಜಿಡಿಪಿ ದರ ಶೇ.7ಕ್ಕೆ ನಿಗದಿ: 2019-20 ಆರ್ಥಿಕ ಸಮೀಕ್ಷೆ ವರದಿ ಬಹಿರಂಗ

ಎರಡನೇ ಅವಧಿಗೆ ಆಯ್ಕೆಯಾಗಿರುವ ಮೋದಿ ನೇತೃತ್ವದ ಸರ್ಕಾರದ ಸಂಸತ್ತಿನ ಮೊದಲ ಅಧಿವೇಶನದಲ್ಲಿಂದು ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತಿದೆ.
ಭಾರತದ ಜಿಡಿಪಿ ದರ ಶೇ.7ಕ್ಕೆ ನಿಗದಿ: 2019-20 ಆರ್ಥಿಕ ಸಮೀಕ್ಷೆ ವರದಿ ಬಹಿರಂಗ
ಭಾರತದ ಜಿಡಿಪಿ ದರ ಶೇ.7ಕ್ಕೆ ನಿಗದಿ: 2019-20 ಆರ್ಥಿಕ ಸಮೀಕ್ಷೆ ವರದಿ ಬಹಿರಂಗ
ನವದೆಹಲಿ: ಎರಡನೇ ಅವಧಿಗೆ ಆಯ್ಕೆಯಾಗಿರುವ ಮೋದಿ ನೇತೃತ್ವದ ಸರ್ಕಾರದ ಸಂಸತ್ತಿನ ಮೊದಲ ಅಧಿವೇಶನದಲ್ಲಿಂದು ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತಿದೆ.
ಆರ್ಥಿಕ ಸಮೀಕ್ಷೆ 2019 - 20 ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ 7 ರಷ್ಟು ನಿಗದಿ ಮಾಡಿದೆ.
2018 ನೇ ಸಾಲಿನಲ್ಲಿ ಶೇ 6. 4 ರಷ್ಟಿದ್ದ ವಿತ್ತೀಯ ಕೊರತೆಯನ್ನು ಪ್ರಸಕ್ತ ಸಾಲಿಗೆ ಶೇ 5.8 ಕ್ಕೆ ನಿಗದಿ ಮಾಡಿದೆ. 
ಮೋದಿ 2.0 ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆ: ಜಿಡಿಪಿ ದರ ಶೇ.7ಕ್ಕೆ ನಿಗದಿ
ರಾಜ್ಯಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2018-19ರ ಆರ್ಥಿಕ ಸಮೀಕ್ಷೆಯ ಪ್ರಕಾರ,2019-20ನೇ ಸಾಲಿನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಎಂದು ಅಂದಾಜಿಸಲಾಗಿದೆ.
ಮುಖ್ಯಾಂಶಗಳು
  • ನಾವು ಸಾಕಷ್ಟು ಸಮರ್ಪಕ ಪ್ರಯತ್ನ ಮಾಡಿದ್ದೇವೆ. ಆರ್ಥಿಕತೆಯ ವಿಚಾರಗಳಿಗೆ ನಾವು ಕೊಡುಗೆ ನೀಡಲು ಸಮರ್ಥರಾಗಿದ್ದೇವೆ ಎಂದು ನಾವು ಭಾವಿಸುತ್ತೇವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದರು.
  • ದೇಶದಲ್ಲಿನ ರಾಜಕೀಯ ಸ್ಥಿರತೆಯು ಆರ್ಥಿಕತೆಯ ಶಕ್ತಿಯನ್ನು ವರ್ಧಿಸಲು ಸಹಕಾರಿಯಾಗಬೇಕು.ಹೆಚ್ಚಿನ ಸಾಮರ್ಥ್ಯದ ಬಳಕೆ ಮತ್ತು ವ್ಯಾಪಾರ ನಿರೀಕ್ಷೆಗಳಲ್ಲಿ ಹೆಚ್ಚಳವು ಹೂಡಿಕೆಯ ಚಟುವಟಿಕೆಯನ್ನು ಹೆಚ್ಚಿಸಬೇಕು" ಎಂದು ಸುಬ್ರಮಣಿಯನ್ ತಮ್ಮ ಸಮೀಕ್ಷೆಯಲ್ಲಿ ಹೇಳುತ್ತಾರೆ.
  • ಹೆಚ್ಚಿನ ಖಾಸಗಿ ಹೂಡಿಕೆಯ ಹಿನ್ನಲೆಯಲ್ಲಿ 2019-20 ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆಯಲ್ಲಿ ಹೆಚ್ಚಳದ ಮುನ್ಸೂಚನೆ ನೀಡುತ್ತದೆ.ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದ ಮೂಲಗಳ ಪ್ರಕಾರ, ಈ ಅವಧಿಯಲ್ಲಿ ಹೂಡಿಕೆ ದರವು ಹೆಚ್ಚಿನ ಸಾಲದ ಬೆಳವಣಿಗೆ ಮತ್ತು ಸುಧಾರಿತ ಬೇಡಿಕೆಗೆ ಕಾರಣವಾಗಲಿದೆ.
  • 2019-20ರ ಜಿಡಿಪಿ ಬೆಳವಣಿಗೆಯನ್ನು 7% ಎಂದು ಊಹಿಸಲಾಗಿದೆ.ಆದರೆ 2025 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ಸಾಧಿಸಲು ಈ ಬೆಳವಣಿಗೆ 8% ಆಗಿರಬೇಕು
  • 2019-20ರಲ್ಲಿ ತೈಲ ಬೆಲೆ ಕುಸಿಯುವ ನಿರೀಕ್ಷೆಯಿದೆ. ಇದು ಸರ್ಕಾರಕ್ಕೆ ಮತ್ತು ಸಾಮಾನ್ಯ ಜನರಿಗೆ ಸಹಕಾರಿಯಾಗಿದೆ
  • ಸಾಮಾನ್ಯ ಹಣಕಾಸಿನ ಕೊರತೆಯು ಹಣಕಾಸು ವರ್ಷದಲ್ಲಿ 5.8% ರಷ್ಟಿದ್ದು ಕಳೆದ ವರ್ಷ 6.4% ರಷ್ಟಿತ್ತು.
  • ಕೆಟ್ಟ-ಸಾಲಗಳ ಅನುಪಾತದಲ್ಲಿ ಕಡಿತವಾಗುವಿಕೆಯು ಬಂಡವಾಳ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಲಿದೆ.
ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಸಿದ್ಧಪಡಿಸಿದ ಸಮೀಕ್ಷೆಯು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗುವ ಪ್ರಯತ್ನದಲ್ಲಿ ಆರ್ಥಿಕತೆಯು ಎದುರಿಸಬೇಕಾಗುವ ಸವಾಲುಗಳ ಮೇಲೆ ಬೆಳಕು ಚೆಲ್ಲಿದೆ.2024 ರ ವೇಳೆಗೆ ಆರ್ಥಿಕತೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಮೋದಿಯವರ ಗುರಿಯನ್ನು ಪೂರೈಸಲು ಅಗತ್ಯವಾದ ನೀಲನಕ್ಷೆಯನ್ನು ಸಿದ್ದಮಾಡಿದೆ.
ಸಾಂಪ್ರದಾಯಿಕವಾಗಿ ಸ್ಥೂಲ ಆರ್ಥಿಕತೆ ಮತ್ತು ಕೈಗಾರಿಕೆ ಮತ್ತು ವಿವಿಧ ಕ್ಷೇತ್ರಗಳು ಮತ್ತು ದೃಷ್ಟಿಕೋನಗಳನ್ನೊಳಗೊಂಡ ಈ ಸಮೀಕ್ಷೆಯು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮೋದಿ 2.0 ಸರ್ಕಾರದ ಮೊದಲ ಬಜೆಟ್ ಅನ್ನು ಮಂಡಿಸುವುದಕ್ಕಿಂತ ಒಂದು ದಿನ ಮುನ್ನ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com