ಪ್ರಸಕ್ತ ಹಣಕಾಸು ವರ್ಷದಲ್ಲಿ 18,000 ಕ್ಯಾಂಪಸ್ ಸೆಲೆಕ್ಷನ್ ಗುರಿ: ಇನ್ಫೋಸಿಸ್

ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 18,000 ಮಂದಿಯನ್ನು ಕ್ಯಾಂಪಸ್‌ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದೆ.
ಇನ್ಫೋಸಿಸ್
ಇನ್ಫೋಸಿಸ್
ಬೆಂಗಳೂರು: ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 18,000 ಮಂದಿಯನ್ನು ಕ್ಯಾಂಪಸ್‌ ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದೆ.
2.29 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಇನ್ನೂ ಸಾಕಷ್ಟು ಒತ್ತಡದಲ್ಲಿದೆ. ಆದರೂ ಇದು ತನ್ನ ಸೇವೆಗಳ ಪೂರೈಕೆ ಮೇಲೆ ಯಾವ ಪರಿಣಾಮ ಬೀರಿಲ್ಲ ಎಂದು ಕಂಪನಿ ಪ್ರತಿಪಾದಿಸಿದೆ.
"ಈ ತ್ರೈಮಾಸಿಕದಲ್ಲಿ ಒಟ್ಟಾರೆ  ಸುಮಾರು 8,000 ಜನರನ್ನು ನೇಮಕ ಮಾಡಿಕೊಂಡಿದ್ದೇವೆ, ಅದರಲ್ಲಿ 2,500 ಮಂದಿ ಹೊಸಬರು(ಫ್ರೆಶರ್‌ಗಳು). ಈ ವರ್ಷ ನಾವು ಸುಮಾರು 18,000 ಜನರನ್ನು ದೇಶಾದ್ಯಂತದ ವಿಶ್ವವಿದ್ಯಾಲಯಗಳಿಂದ  ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ" ಇನ್ಫೋಸಿಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.
ಜೂನ್ 2019 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ 906 ಜನರನ್ನು ಸೇರ್ಪಡೆ ಮಾಡಿಕೊಂಡಿದೆ.ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 20.4 ಕ್ಕೆ ಹೋಲಿಸಿದರೆ ಇದೀಗ ಶೇ. 23.4 ರಷ್ಟು ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com