ಬೆಂಗಳೂರು ಪರಿಸರ ಸಂರಕ್ಷಣೆಗೆ ಐಶ್ವರ್ಯಾ ರೈ ಪಣ: ಮಾಲಿನ್ಯ ತಡೆ ಸ್ಟಾರ್ಟ್ಅಪ್ ನಲ್ಲಿ 1 ಕೋಟಿ ಹೂಡಿಕೆ

ಕರ್ನಾಟಕ ಮೂಲದ ಬಾಲಿವುಡ್ ನಟಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಚ್ಚನ್, ತಾಯಿ ವೃಂದಾ ಕೆ.ಆರ್ ಅವರೊಂದಿಗೆ ಸೇರಿ ಬೆಂಗಲೂರು ಮೂಲದ ಪರಿಸರ ಸಂರಕ್ಷಣೆ ಸ್ಟಾರ್ಟ್ಅಪ್....
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್
ಬೆಂಗಳೂರು: ಕರ್ನಾಟಕ ಮೂಲದ ಬಾಲಿವುಡ್ ನಟಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಚ್ಚನ್, ತಾಯಿ ವೃಂದಾ ಕೆ.ಆರ್ ಅವರೊಂದಿಗೆ ಸೇರಿ ಬೆಂಗಲೂರು ಮೂಲದ ಪರಿಸರ ಸಂರಕ್ಷಣೆ ಸ್ಟಾರ್ಟ್ಅಪ್  'ಅಂಬೇ’ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು  ಬಿಸಿನೆಸ್ ಇನ್ಸೈಡರ್ ವರದಿ ತಿಳಿಸಿದೆ.
ಬೆಂಗಳೂರು ಮೂಲದ ಸ್ಟಾರ್ಟ್ಅಪ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ತಾಯಿ ಸೇರಿ 1 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಈ ಹಿಂದೆ ಬಾಲಿವುಡ್ ನಟ ನಟಿಯರಾದ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ಅಕ್ಷಯ್ ಕುಮಾರ್. ಸಹ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದರು.
ಇದು ಐಶ್ವರ್ಯಾ ಅವರ ಎರಡನೇ ಮಹತ್ವದ ಹೂಡಿಕೆಯಾಗಿದೆ.ಮಾರು 10 ವರ್ಷಗಳ ಹಿಂದೆ ಅವರು ಮಹಾರಾಷ್ಟ್ರದ ಪವನ ವಿದ್ಯುತ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರು. 
ಸ್ಟಾರ್ಟ್ಅಪ್  'ಅಂಬೇ ’ಡಾಟೈರ್ ಟೆಕ್ನಾಲಜಿಯ ಉತ್ಪನ್ನವಾಗಿದ್ದು, ಅಕ್ಷಯ್ ಜೋಶಿ, ಜೈದೀಪ್ ಸಿಂಗ್ ಮತ್ತು ಮಧುಸೂದನ್ ಆನಂದ್ ಸೇರಿ ಇದನ್ನು 2017ರಲ್ಲಿ ಸ್ಥಾಪನೆ ಮಾಡಿದ್ದರು.ಈ ಸಂಸ್ಥೆಯು ವಾತಾವರಣ ಗಾಳಿಯ ಪರಿಶುದ್ದತೆ ಪರಿಶೀಲನೆ ನಡೆಸುತ್ತದೆ.ಈ ಸಂಸ್ಥೆ ಇದುವರೆಗೆ ನಗರದಲ್ಲಿ ನೂರಕ್ಕೂ ಹೆಚ್ಚು ವಾಯು ಸಂವೇದಕ (ಸೆನ್ಸಾರ್) ಸ್ಥಾಪನೆ ಮಾಡಿದೆ. ಗೂಗಲ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ಈ ಹಿಂದೆ ಇದೇ ಸಂಸ್ಥೆಯಲ್ಲಿ ಹುಡಿಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com