ರಿಸರ್ವ್ ಬ್ಯಾಂಕ್ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು: ಜಲಾನ್ ಸಮಿತಿ

ಮಹತ್ವದ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ನಿರ್ವಹಿಸಬೇಕಾದಬಂಡವಾಳ ನಿಕ್ಷೇಪಗಳನ್ನು ನಿರ್ಧರಿಸಸಲು ರಚಿಸಲಾಗಿದ್ದ ಆರ್‌ಬಿಐನ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಉನ್ನತ....
ರಿಸರ್ವ್ ಬ್ಯಾಂಕ್
ರಿಸರ್ವ್ ಬ್ಯಾಂಕ್
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ನಿರ್ವಹಿಸಬೇಕಾದಬಂಡವಾಳ ನಿಕ್ಷೇಪಗಳನ್ನು ನಿರ್ಧರಿಸಸಲು ರಚಿಸಲಾಗಿದ್ದ ಆರ್‌ಬಿಐನ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಬುಧವಾರ ತನ್ನ ವರದಿಯನ್ನು  ನೀಡಿದೆ. ಆರ್‌ಬಿಐಗೆ ಆರ್ಥಿಕ ಬಂಡವಾಳ ಚೌಕಟ್ಟ ಅಂತಿಮಗೊಳಿಸಲು ಆರು ಸದಸ್ಯರ ಜಲಾನ್ ಸಮಿತಿಯನ್ನು  ಡಿಸೆಂಬರ್ 26, 2018ರಂದು ರಚಿಸಲಾಗಿತ್ತು.
ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಹಾಗೆಯೇ ಇನ್ನು ಮುಂದೆ ಈ ವಿಚಾರದಲ್ಲಿ ಸಭೆ ಸೇರುವುದಿಲ್ಲ ಎಂದು ನವದೆಹಲಿಯಲ್ಲಿ ನಿಡಿರುವ ಹೇಳಿಕೆ ತಿಳಿಸಿದೆ.
ಮುಂದಿನ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಆರ್‌ಬಿಐ ತನ್ನ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು, ಕೇಂದ್ರೀಯ ಬ್ಯಾಂಕಿನೊಂದಿಗೆ ಹೆಚ್ಚುವರಿ ಮೊತ್ತವನ್ನು ನಿರ್ಣಯಿಸಲು ಹಣಕಾಸು ಸಚಿವಾಲಯ ನೇಮಿಸಿರುವ ಜಲಾನ್ ಸಮಿತಿ ಈ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com