ಉಡಾನ್ ಅಡಿಯಲ್ಲಿ ಕಾರ್ಯಾಚರಣಾ ಮಾರ್ಗಗಳ ಸಂಖ್ಯೆ 186 ಕ್ಕೇರಿಕೆ
ಉಡಾನ್ ಅಡಿಯಲ್ಲಿ ಕಾರ್ಯಾಚರಣಾ ಮಾರ್ಗಗಳ ಸಂಖ್ಯೆ 186 ಕ್ಕೇರಿಕೆ

ಉಡಾನ್ ಅಡಿಯಲ್ಲಿ ಕಾರ್ಯಾಚರಣಾ ಮಾರ್ಗಗಳ ಸಂಖ್ಯೆ 186 ಕ್ಕೇರಿಕೆ

ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ 12 ಹೊಸ ಮಾರ್ಗಗಳು ಇತ್ತೀಚೆಗೆ ಕಾರ್ಯಾರಂಭ ಮಾಡಿವೆ.
ನವದೆಹಲಿ: ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ 12  ಹೊಸ ಮಾರ್ಗಗಳು ಇತ್ತೀಚೆಗೆ ಕಾರ್ಯಾರಂಭ ಮಾಡಿವೆ. 
ಇದರಿಂದಾಗಿ ಮಂಜೂರಾದ ಒಟ್ಟು 706  ಮಾರ್ಗಗಳಲ್ಲಿ ಉಡಾನ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು ಮಾರ್ಗಗಳ ಸಂಖ್ಯೆ 186 ಕ್ಕೇರಿದೆ. ಇದರಲ್ಲಿ 8 ಪ್ರವಾಸೀ ಆರ್.ಸಿ.ಎಸ್. ಮಾರ್ಗಗಳು ಸೇರಿವೆ.  ದುರ್ಗಾಪುರ ವಿಮಾನ ನಿಲ್ದಾಣವು ಈ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 40 ನೇ ವಿಮಾನ ನಿಲ್ದಾಣವಾಗಿದೆ. ಕೋಲ್ಕತ್ತಾ (ಪಶ್ಚಿಮ ಬಂಗಾಳ), ಅಲಹಾಬಾದ್ (ಉತ್ತರ ಪ್ರದೇಶ), ಅಲಹಾಬಾದ್ (ಉ.ಪ್ರ.) –ಕೋಲ್ಕೊತ್ತಾ (ಪ.ಬ.), ಅಲಹಾಬಾದ್ (ಉ.ಪ್ರ.) – ರಾಯಪುರ (ಸಿ.ಜಿ.), ರಾಯಪುರ (ಸಿ.ಜಿ.)- ಅಲಹಾಬಾದ್ (ಉ.ಪ್ರ.), ಗ್ವಾಲಿಯರ್ (ಮ.ಪ್ರ.)-ಬೆಂಗಳೂರು (ಕರ್ನಾಟಕ),  ಬೆಂಗಳೂರು (ಕರ್ನಾಟಕ)- ಗ್ವಾಲಿಯರ್ (ಮ.ಪ್ರ.), ಕೋಲ್ಕೊತ್ತಾ (ಪ.ಬ.)- ಗ್ವಾಲಿಯರ್ (ಮ.ಪ್ರ.), ಗ್ವಾಲಿಯರ್ (ಮ.ಪ್ರ.)- ಕೋಲ್ಕೊತ್ತಾ (ಪ.ಬ.), ಮುಂಬಯಿ (ಮಹಾರಾಷ್ಟ್ರ) –ಬೆಳಗಾವಿ (ಕರ್ನಾಟಕ), ಬೆಳಗಾವಿ (ಕರ್ನಾಟಕ)- ಮುಂಬಯಿ (ಮಹಾರಾಷ್ಟ್ರ), ಮುಂಬಯಿ (ಮಹಾರಾಷ್ಟ್ರ)-ದುರ್ಗಾಪುರ (ಪ.ಬ.), ದುರ್ಗಾಪುರ (ಪ.ಬ.)- ಮುಂಬಯಿ (ಮಹಾರಾಷ್ಟ್ರ) ನಡುವೆ ಉಡಾನ್ ಅಡಿ ವಿಮಾನಗಳು ಸಂಚರಿಸುತ್ತಿವೆ. 

Related Stories

No stories found.

Advertisement

X
Kannada Prabha
www.kannadaprabha.com