ಕ್ರಿಪ್ಟೊ ಕರೆನ್ಸಿ ವಹಿವಾಟು ನಡೆಸುವವರೇ ಹುಷಾರ್, ಜೈಲು ಪಾಲಾಗುವ ಸಾಧ್ಯತೆ

ಖಾಸಗಿಯಾಗಿ ಚಲಾವಣೆಯಲ್ಲಿರುವ ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸುವಂತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಖಾಸಗಿಯಾಗಿ ಚಲಾವಣೆಯಲ್ಲಿರುವ ಕ್ರಿಪ್ಟೊ ಕರೆನ್ಸಿಗಳನ್ನು ನಿಷೇಧಿಸುವಂತೆ ಆಂತರಿಕ ಸಚಿವಾಲಯ ತಂಡ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಅನಧಿಕೃತ ಡಿಜಿಟಲ್ ಕರೆನ್ಸಿ ವಹಿವಾಟಿನಲ್ಲಿ ತೊಡಗಿರುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಅಧಿಕ ಮೊತ್ತದ ದಂಡ ವಿಧಿಸಬೇಕೆಂದು ಕೂಡ ಸಲಹೆ ನೀಡಿದೆ.
ವಿದೇಶಗಳಲ್ಲಿ ಇಂದು ಕ್ರಿಪ್ಟೊ ಕರೆನ್ಸಿಗಳು ಅಣಬೆಗಳಂತೆ ತಲೆ ಎತ್ತುತ್ತಿದ್ದು ಭಾರತದಲ್ಲಿ ಕೂಡ ಲಕ್ಷಾಂತರ ಜನರು ಇಂದು ಈ ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಆಂತರಿಕ ಸಚಿವಾಲಯ ತಂಡ ಕರಡು ಮಸೂದೆಯೊಂದಿಗೆ ವರದಿಯನ್ನು ಸಲ್ಲಿಸಿದೆ.
ಕೇಂದ್ರ ಸಂಪುಟದ ಮುಂದೆ ಈ ಶಿಫಾರಸ್ಸನ್ನು ಮಂಡಿಸುವ ಮುನ್ನ ಈ ಕರಡು ಮಸೂದೆಯನ್ನು ಸಚಿವರುಗಳು ಮತ್ತು ಸಂಬಂಧಪಟ್ಟ ನಿಯಂತ್ರಕರು ಪರೀಕ್ಷಿಸಲಿದೆ.
ಆರ್ ಬಿಐ ಪ್ರತಿನಿಧಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಆರ್ಥಿಕ ವ್ಯವಹಾರಗಳ ಇಲಾಖೆ ಗುಂಪನ್ನು ರಚಿಸಿ ಭಾರತದಲ್ಲಿ ಡಿಜಿಟಲ್ ಕರೆನ್ಸಿಗಳಿಗೆ ಸೂಕ್ತವಾದ ಮಾರ್ಗಸೂಚಿಯನ್ನು ನಿಗದಿಪಡಿಸಬೇಕು ಎಂದು ವರದಿಯಲ್ಲಿ ಆಂತರಿಕ ಸಚಿವಾಲಯ ತಂಡ ಶಿಫಾರಸು ಮಾಡಿದೆ.
ಹಣಕಾಸು ಇಲಾಖೆಯ ಕಾರ್ಯದರ್ಶಿ ಎಸ್ ಸಿ ಗಾರ್ಗ್ ನೇತೃತ್ವದ ತಂಡ, ಆರ್ ಬಿಐ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಆರಂಭಿಸಬೇಕೆಂದು ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com