ಅಕ್ರಮ ಹಣ ವರ್ಗಾವಣೆ: ಬೋಸ್ನಿಯಾದಲ್ಲಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅರೆಸ್ಟ್

ವಿಶ್ವ ಖ್ಯಾತಿಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ.;
ಪ್ರಮೋದ್ ಮಿತ್ತಲ್
ಪ್ರಮೋದ್ ಮಿತ್ತಲ್
ನವದೆಹಲಿ: ವಿಶ್ವ ಖ್ಯಾತಿಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ.;ಲಕ್ಷಾಂತರ ಡಾಲರ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರಮೋದ್ ಮಿತ್ತಲ್ ಬಂಧನವಾಗಿದೆ.
ಸ್ಥಳೀಯ ಸುದ್ದಿ ಪೋರ್ಟಲ್ "ಜರ್ನಲ್.ಇನ್ಫೊ" ಪ್ರಕಾರ, ಗ್ಲೋಬಲ್ ಇಸ್ಪಾಟ್ ಚಾರ್ಕೋಲ್ ಇಂಡಸ್ಟ್ರಿ ಲುಕಾವಾಕ್ ಮೂಲಕ ಹಣ ವರ್ಗಾವಣೆಯ ಆರೋಪದಡಿ ಮಿತ್ತಲ್ ಜತೆಗೆ ಇನ್ನೂ ಇಬ್ಬರ ಬಂಧನವ್ಗಿದೆ.ಬಂಧಿತ ಶಂಕಿತರು ಬುಧವಾರ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ಬಂಧಿತ ಇಬ್ಬರು ಅಧಿಕಾರಿಗಳಲ್ಲಿ ಜನರಲ್ ಮ್ಯಾನೇಜರ್ ಪರಮೇಶ್ ಭಟ್ಟಾಚಾರ್ಯ ಕೂಡ ಇದ್ದಾರೆ.
ಪ್ರಮೋದ್ ಮಿತ್ತಲ್ ಬೋಸ್ನಿಯಾದ ಈಶಾನ್ಯ ಪಟ್ಟಣ ಲುಕವ್ಯಾಕ್‍ನಲ್ಲಿ ಗೋಕಿಲ್ ಎಂಬ ಕೋಕ್ ಘಟಕವನ್ನು 2003ರಲ್ಲಿ ಸ್ಥಾಪಿಸಿದ್ದರು. ಅಂದಿನಿಂದಲೂ ಅವರು ಆ ಘಟಕದ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಎಂದು ಕಂಪನಿಯ ವೆಬ್‌ಸೈಟ್ ತೋರಿಸುತ್ತದೆ. ಮಿತ್ತಲ್ ಮತ್ತು ಇತರ ಇಬ್ಬರು ಅಧಿಕಾರ ದುರುಪಯೋಗ ಮತ್ತು ಆರ್ಥಿಕ ಅಪರಾಧಗಳನ್ನು ಒಳಗೊಂಡ "ಸಂಘಟಿತ ಅಪರಾಧ" ದೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಲಾಗಿರುವುದರಿಂದ, ಅವರನ್ನು ಸುಮಾರು 45 ವರ್ಷಗಳ ಕಾಲ ಜೈಲಿಗೆ ಹಾಕಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಲ್ಲದೆ, ಪ್ರಮೋದ್ ಮಿತ್ತಲ್ ಮತ್ತು ಇತರರು ಮಾಡಿದ ಅಪರಾಧಗಳಲ್ಲಿ ಸಂಬಂಧ ಹೊಂದಿದ್ದಾರೆಂದು ಪರಿಗಣಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿಗೆ ಬಂಧನ ವಾರಂಟ್ ಹೊರಡಿಸಲಾಗಿದೆ. ಅಲ್ಲದೆ, ಪ್ರಮೋದ್ ಮಿತ್ತಲ್ ಮತ್ತು ಇತರರು ಮಾಡಿದ ಅಪರಾಧಗಳಲ್ಲಿ ಸಂಬಂಧ ಹೊಂದಿದ್ದಾರೆಂದು ಪರಿಗಣಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿಗೆ ಬಂಧನ ವಾರಂಟ್ ಹೊರಡಿಸಲಾಗಿದೆ  ಎಂದು ನ್ಯೂಸ್ ಪೋರ್ಟಲ್ ಜುರ್ನಾಲ್.ಇನ್ಫೊ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com