ನಿಯಮ ಉಲ್ಲಂಘನೆ: ಮೊಬಿಕ್ವಿಕ್, ಹಿಪ್ ಬಾರ್ ಕಂಪೆನಿಗಳಿಗೆ 26 ಲಕ್ಷ ರೂ. ದಂಡ

ಆನ್‌ಲೈನ್ ಪಾವತಿ ಕಂಪೆನಿ ಒನ್ ಮೊಬಿಕ್ ವಿಕ್ ಸಿಸ್ಟಮ್ಸ್ ಮತ್ತು ಹಿಪ್ ಬಾರ್ ಮೇಲೆ ರಿಸರ್ವ್ ಬ್ಯಾಂಕ್ ...
ರಿಸರ್ವ್ ಬ್ಯಾಂಕ್
ರಿಸರ್ವ್ ಬ್ಯಾಂಕ್
ಮುಂಬೈ: ಆನ್‌ಲೈನ್ ಪಾವತಿ ಕಂಪೆನಿ ಒನ್ ಮೊಬಿಕ್ ವಿಕ್ ಸಿಸ್ಟಮ್ಸ್ ಮತ್ತು ಹಿಪ್ ಬಾರ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 26 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಒನ್ ಮೊಬಿಕ್ ವಿಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಸುಮಾರು 15 ಲಕ್ಷ ರೂಪಾಯಿ ದಂಡ ಹಾಕಿದರೆ, ಹಿಪ್ ಬಾರ್ ಪ್ರೈವೆಟ್ ಲಿಮಿಟೆಡ್ ಗೆ 10 ಲಕ್ಷದ 85 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ ಬಿಐ ಮಾರ್ಗಸೂಚಿಯನ್ನು ಅನುಸರಿಸದ ಹಿನ್ನಲೆಯಲ್ಲಿ ಈ ಎರಡು ಪ್ರಿಪೇಯ್ಡ್ ಪೇಮೆಂಟ್ ವಿಧಾನ ಕಂಪೆನಿಗಳ ಮೇಲೆ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com