ಆರ್ ಬಿಐ: ರೆಪೋ ದರ ಶೇ.5.75ಕ್ಕೆ ಇಳಿಕೆ, ಬ್ಯಾಂಕ್ ಸಾಲಗಳು ಇನ್ನಷ್ಟು ಅಗ್ಗ; ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ. ಶುಲ್ಕ ರದ್ದು

ರಿಸರ್ವ್ ಬ್ಯಾಂಕ್ ಗುರುವಾರ ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿ ಶೇ. 5.75ಕ್ಕೆ ಇಳಿಸಿದೆ.
ಶಕ್ತಿಕಾಂತ್ ದಾಸ್
ಶಕ್ತಿಕಾಂತ್ ದಾಸ್
ಮುಂಬೈ: ರಿಸರ್ವ್ ಬ್ಯಾಂಕ್ ಗುರುವಾರ ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿ ಶೇ. 5.75ಕ್ಕೆ ಇಳಿಸಿದೆ. 2019ರ ಸಾಲಿನಲ್ಲಿ ಸತತ ಮೂರನೇ ಬಾರಿ ರೆಪೋ ದರ ಕಡಿತವನ್ನು ಆರ್ ಬಿಐ ಘೋಷಿಸಿದೆ. ಈ ಹಿಂದೆ ಶೇ. 6ರಷ್ಟಿದ್ದ ರೆಪೋ ದರವನ್ನು ಶೇ 5.75 ಕ್ಕೆ ಇಳಿಸಲಾಗಿದೆ..
ದೇಶದ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಬ್ಯಾಂಕ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರಿವರ್ಸ್ ರೆಪೋ ದರ ಮತ್ತು ಬ್ಯಾಂಕ್ ದರ ಕ್ರಮವಾಗಿ 5.50 ಮತ್ತು 6.0 ಆಗಿರಲಿದೆ.
ಇನ್ನು ಜಿಡಿಪಿ ಬೆಳವಣಿಗೆ ಅಂದಾಜನ್ನು ಈ ಹಿಂದಿನ ಶೇ. 7.2ರಿಂದ ಶೇ. 7ಕ್ಕೆ ಕಡಿತ ಮಾಡಲಾಗಿದೆ. ಹಣದುಬ್ಬರ ಪ್ರಮಾಣ 2019-20 ರ ಮೊದಲಾರ್ಧದಲ್ಲಿ 3.0% -3.1% ಮತ್ತು ವರ್ಷದ ದ್ವಿತೀಯಾರ್ಧದಲ್ಲಿ 3.4% -3.7% ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
ಎಟಿಎಂ ಶುಲ್ಕಗಳು ಮತ್ತು ಶುಲ್ಕದ ಸಂಪೂರ್ಣ ಪರಿಮಾಣವನ್ನು ಪರೀಕ್ಷಿಸಲು ಸಿಇಒ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಅಧ್ಯಕ್ಷತೆಯಡಿ ಎಲ್ಲ ಪಾಲುದಾರರನ್ನು ಒಳಗೊಂಡ ಸಮಿತಿಯನ್ನು ಸ್ಥಾಪಿಸಲು ಕೇಂದ್ರ ಬ್ಯಾಂಕ್ ತೀರ್ಮಾನಿಸಿದೆ.
ಆರ್.ಟಿ.ಜಿ.ಎಸ್ ಹಾಗೂ ಎನ್.ಇ.ಎಫ್.ಟಿ. ವಹಿವಾಟುಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ಆರ್ ಬಿಐ ತಿಳಿಸಿದ್ದು,  ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಪ್ರಯೋಜನವನ್ನು ರವಾನಿಸುವಂತೆ ಸೂಚಿಸಿದೆ.
ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸುವ ಸಲುವಾಗಿ ಎನ್ಇಎಫ್ ಟಿ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್ ಮತ್ತು ಆರ್ ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್) ಶುಲ್ಕ ರಹಿತವಾಗಿಸಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ.
 
ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಪ್ರಯೋಜನವನ್ನು ರವಾನಿಸುವಂತೆ ತಿಳಿಸಿರುವ ಆರ್ ಬಿಐ, ಈ ಸಂಬಂಧ ಎಲ್ಲ ಬ್ಯಾಂಕುಗಳಿಗೂ ಇನ್ನೊಂದು ವಾರದಲ್ಲಿ ಸೂಚನೆ ನೀಡಲಾಗುವುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com