ಒಂದೆಡೆ ಪತ್ರಿಕೆಗಳು ಮುಚ್ಚುವ ಟ್ರೆಂಡ್ ಬೆಳೆಯುತ್ತಿದ್ದರೆ, 2018ರಲ್ಲಿ ಗೂಗಲ್ ನ್ಯೂಸ್ ಗಳಿಸಿದ ಲಾಭವೆಷ್ಟು ಗೊತ್ತೇ?

2018 ನೇ ಸಾಲಿನಲ್ಲಿ ವಿಶ್ವಾದ್ಯಂತ ಮಧ್ಯಮ ಹಾಗೂ ಸಣ್ಣ ಪತ್ರಿಕೆಗಳು ಸಾಲು ಸಾಲಾಗಿ ಮುಚ್ಚಿದವು. ಆದರೆ ವೆಬ್ ಮೀಡಿಯಾದ ದೈತ್ಯ ಗೂಗಲ್ ನ್ಯೂಸ್ ಮಾತ್ರ ಭರ್ಜರಿ ಲಾಭ ಗಳಿಸಿದೆ.
2018 ರಲ್ಲಿ ಸಾಲುಸಾಲಾಗಿ ಮುಚ್ಚಿದ ಪತ್ರಿಕೆಗಳು ಆದರೆ ಗೂಗಲ್ ನ್ಯೂಸ್ ಗಳಿಸಿದ ಲಾಭವೆಷ್ಟು ಗೊತ್ತೇ?
2018 ರಲ್ಲಿ ಸಾಲುಸಾಲಾಗಿ ಮುಚ್ಚಿದ ಪತ್ರಿಕೆಗಳು ಆದರೆ ಗೂಗಲ್ ನ್ಯೂಸ್ ಗಳಿಸಿದ ಲಾಭವೆಷ್ಟು ಗೊತ್ತೇ?
ನ್ಯೂಯಾರ್ಕ್: 2018 ನೇ ಸಾಲಿನಲ್ಲಿ ವಿಶ್ವಾದ್ಯಂತ ಮಧ್ಯಮ ಹಾಗೂ ಸಣ್ಣ ಪತ್ರಿಕೆಗಳು ಸಾಲು ಸಾಲಾಗಿ ಮುಚ್ಚಿದವು. ಆದರೆ ವೆಬ್ ಮೀಡಿಯಾದ ದೈತ್ಯ ಗೂಗಲ್ ನ್ಯೂಸ್ ಮಾತ್ರ ಭರ್ಜರಿ ಲಾಭ ಗಳಿಸಿದೆ. 
ಕಳೆದ ವರ್ಷ ಗೂಗಲ್ ಸರ್ಚ್ ನಿಂದ ಗೂಗಲ್ ನ್ಯೂಸ್ ಗೆ ಬರೊಬ್ಬರಿ 4.7 ಬಿಲಿಯನ್ ಡಾಲರ್ ಹಣ ಹರಿದುಬಂದಿದ್ದು, ಈ ಮೊತ್ತ ಅಮೆರಿಕದ ಮಾಧ್ಯಮಗಳು ಒಟ್ಟಾರೆ ಗಳಿಸಿದ ಲಾಭದ ಮೊತ್ತದ ಹತ್ತಿರದ ಲಾಭವನ್ನು ಗೂಗಲ್ ನ್ಯೂಸ್ ಏಕಾಂಗಿಯಾಗಿ ಗಳಿಸಿದೆ.
ಅಮೆರಿಕದ  ನ್ಯೂಸ್ ಇಂಡಸ್ಟ್ರಿ ಡಿಜಿಟಲ್ ಜಾಹಿರಾತುಗಳಿಂದ ಒಟ್ಟಾರೆ 5.1 ಬಿಲಿಯನ್ ಲಾಭ ಗಳಿಸಿತ್ತು. 
ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವಿಶ್ಲೇಷಣಾತ್ಮಕ ಲೇಖನ ಪ್ರಕಟಿಸಿದ್ದು, ಅಮೆರಿಕಾದಾದ್ಯಂತ 2,000 ಸುದ್ದಿ ಮಾಧ್ಯಮಗಳನ್ನು ಪ್ರತಿನಿಧಿಸುವ ನ್ಯೂಸ್ ಮೀಡಿಯಾ ಅಲಯನ್ಸ್ ನಿಂದ ಅಂಕಿ-ಅಂಶಗಳನ್ನು ಉಲ್ಲೇಖಿಸಿದೆ. ಗೂಗಲ್ ಈ ಅಧ್ಯಯನದ ಅಂಶಗಳ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com