ಸೆನ್ಸೆಕ್ಸ್ ಸತತ 3ನೇ ದಿನವೂ ನೆಗೆತ, 165.94 ಅಂಕ ಏರಿಕೆ

ಜಾಗತಿಕ ಮಾರುಕಟ್ಟೆಗಳ ಸದೃಡ ವಹಿವಾಟಿನಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‍ಇ)ದ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ದಿನವಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಜಾಗತಿಕ ಮಾರುಕಟ್ಟೆಗಳ ಸದೃಡ ವಹಿವಾಟಿನಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‍ಇ)ದ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ದಿನವಾದ ಮಂಗಳವಾರವೂ 165.94 ಅಂಕ ಏರಿಕೆ ಕಂಡಿದ್ದು, 39,950.46ರಲ್ಲಿ ದಿನದಂತ್ಯ ಕಂಡಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)ದ ಸೂಚ್ಯಂಕ ನಿಫ್ಟಿ ಸಹ 42.90 ರಷ್ಟು ಏರಿಕೆ ಕಂಡು 11,965.40 ಕ್ಕೆ ಮುಟ್ಟಿದೆ.
39,900.45 ಅಂಕದೊಂದಿಗೆ ಸದೃಢವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಂತರ 40,066.31 ಹಾಗೂ 39,760.02 ರ ನಡುವೆ ಏರಿಳಿತ ವಹಿವಾಟು ನಡೆಸಿತು. ಅಂತಿಮವಾಗಿ ದಿನದ ವಹಿವಾಟಿನ ಅಂತ್ಯಕ್ಕೆ 165.94 ಅಂಕ ಏರಿಕೆಯೊಂದಿಗೆ 39,950.46ರಲ್ಲಿ ದಿನದಂತ್ಯ ಕಂಡಿದೆ.
ಇದರೊಂದಿಗೆ, ಕಳೆದ ಮೂರು ದಿನಗಳಲ್ಲಿ ಸೆನ್ಸೆಕ್ಸ್ 420.74 ಅಂಕಗಳನ್ನು ಗಳಿಸಿದೆ. ನಿಫ್ಟಿ ದಿನದ ಗರಿಷ್ಠ 12,000.35 ಹಾಗೂ ಕನಿಷ್ಠ ಮಟ್ಟವಾದ 11,904.35ರಲ್ಲಿತ್ತು.
ದೂರಸಂಪರ್ಕ, ಹಣಕಾಸು, ಕೈಗಾರಿಕೆ ಮತ್ತು ಆರೋಗ್ಯ ರಕ್ಷಣಾ ಕಂಪೆನಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆಯಿಂದ ಸೆನ್ಸೆಕ್ಸ್ ಜಿಗಿತ ಕಂಡಿದೆ. ಟಾಟಾ ಮೋಟಾರ್ಸ್ ಡಿವಿಆರ್, ಟಾಟಾ ಮೋಟಾರ್ಸ್‍, ಒಎನ್‍ಜಿಸಿ, ಯೆಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್‍ಗಳ ಷೇರುಗಳು ಹೆಚ್ಚು ಲಾಭ ಗಳಿಸಿದವು. ಆದರೆ, ಬಂಡವಾಳ ಸರಕು ಮತ್ತು ಎಫ್‍ಎಂಸಿಜಿ ವಲಯಗಳ ಷೇರುಗಳಿಗೆ ಖರೀದಿ ಬೆಂಬಲ ವ್ಯಕ್ತವಾಗಿಲ್ಲ. ಸನ್‍ಫಾರ್ಮ, ಎಂ ಅಂಡ್‍ ಎಂ, ಎಲ್‍ ಅಂಡ್‍ ಟಿ ಮತ್ತು ಕೋಲ್‍ ಇಂಡಿಯಾ ಷೇರುಗಳು ನಷ್ಟ ಕಂಡವು.
ಒಟ್ಟಾರೆ, ಬಿಎಸ್‍ಇ ಮಾರುಕಟ್ಟೆ ವಿಸ್ತಾರ ಧನಾತ್ಮಕವಾಗಿತ್ತು. 1,157 ಕಂಪೆನಿಗಳ ಷೇರುಗಳು ಏರಿಕೆ ಕಂಡರೆ, 1,394ಕಂಪೆನಿಗಳ ಷೇರುಗಳು ಇಳಿಕೆ ಕಂಡಿವೆ. ಉಳಿದಂತೆ 159 ಕಂಪೆನಿಗಳ ಷೇರುಗಳು ಯಥಾಸ್ಥಿತಿಯಲ್ಲಿದ್ದವು.
ಸಾಗರೋತ್ತರ, ಯುರೋಪ್‍ ಮಾರುಕಟ್ಟೆಗಳ ಷೇರುಗಳು ಹೆಚ್ಚಿನ ಏರಿಕೆ ದಾಖಲಿಸಿದ್ದು, ಏಷ್ಯಾ ಮಾರುಕಟ್ಟೆಗಳಲ್ಲೂ ಉತ್ತಮ ವಹಿವಾಟು ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com