ಎನ್ ಡಿ ಟಿವಿಯಲ್ಲಿ ರಾಯ್ ದಂಪತಿ ಸ್ಥಾನಕ್ಕೆ ಕುತ್ತು, ಸೆಬಿಯಿಂದ ನಿರ್ಬಂಧ

ಸೆಬಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಎನ್ ಡಿಟಿವಿ ಪ್ರಮೋಟರ್ ಗಳಾದ ಪ್ರಣಯ್ ರಾಯ್, ರಾಧಿಕಾ ರಾಯ್ ಗೆ ಹಣಕಾಸು ಮತ್ತು ಹೂಡಿಕೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಎರಡು ವರ್ಷಗಳ ನಿರ್ಬಂಧ ವಿಧಿಸಿದೆ.

Published: 15th June 2019 12:00 PM  |   Last Updated: 15th June 2019 01:18 AM   |  A+A-


SEBI bars NDTV promoters Prannoy Roy, Radhika Roy from securities market, top positions

ಎನ್ ಡಿ ಟಿವಿಯಲ್ಲಿ ರಾಯ್ ದಂಪತಿ ಸ್ಥಾನಕ್ಕೆ ಕುತ್ತು, ಸೆಬಿಯಿಂದ ನಿರ್ಬಂಧ

Posted By : SBV SBV
Source : The New Indian Express
ನವದೆಹಲಿ: ಸೆಬಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಎನ್ ಡಿಟಿವಿ ಪ್ರಮೋಟರ್ ಗಳಾದ ಪ್ರಣಯ್ ರಾಯ್, ರಾಧಿಕಾ ರಾಯ್ ಗೆ ಹಣಕಾಸು ಮತ್ತು ಹೂಡಿಕೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಎರಡು ವರ್ಷಗಳ ನಿರ್ಬಂಧ ವಿಧಿಸಿದೆ. 

ಸೆಬಿ ನಿರ್ಬಂಧದ ಪರಿಣಾಮ, ಈ ಅವಧಿಯಲ್ಲಿ ರಾಯ್ ದಂಪತಿ ಎನ್ ಡಿ ಟಿವಿ ಅಥವಾ ಸೆಬಿ ವ್ಯಾಪ್ತಿಗೆ ಬರುವ ಯಾವುದೇ ಸಂಸ್ಥೆಯಲ್ಲಿಯೂ ಆಡಳಿತ ಮಂಡಳಿ ಅಥವಾ ಸಂಸ್ಥೆಯ ಉನ್ನತ ಪದವಿಗಳನ್ನು ಹೊಂದುವುದಕ್ಕೆ ಅವಕಾಶ ಇಲ್ಲ. 

ಮೂರು ಲೋನ್ ಒಪ್ಪಂದಗಳ ವಿಷಯವನ್ನು ಕಡಿಮೆ ಮೊತ್ತ ಹೂಡಿಕೆ ಮಾಡಿರುವ (ಅಲ್ಪಸಂಖ್ಯಾತ) ಹೂಡಿಕೆದಾರರ ಗಮನಕ್ಕೆ ತರದೇ ಮುಂದುವರೆಸಿ ಸೆಬಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕೆ 
ಆರ್ ಆರ್ ಪಿಆರ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮೆಟೆಡ್ ಹಾಗೂ ಪ್ರಣಾಯ್ ರಾಯ್, ರಾಧಿಕಾ ರಾಯ್ ನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡು, 2 ವರ್ಷಗಳ ಕಾಲ ನಿರ್ಬಂಧ ವಿಧಿಸಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp