ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆ ಜೋಡಣೆ ಮಾಡಿ, ಆದಾಯ ತೆರಿಗೆ ಮರುಪಾವತಿ ಪಡೆಯಿರಿ: ಮಾಡುವ ಕ್ರಮ ಇಲ್ಲಿದೆ

ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆಯನ್ನು ಇನ್ನೂ ಜೋಡಣೆ ಮಾಡದಿದ್ದರೆ ತಕ್ಷಣವೇ ಮಾಡಿ, ನಿಮಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆಯನ್ನು ಇನ್ನೂ ಜೋಡಣೆ ಮಾಡದಿದ್ದರೆ ತಕ್ಷಣವೇ ಮಾಡಿ, ನಿಮಗೆ ಆದಾಯ ತೆರಿಗೆ ಹಣ ಮರುಪಾವತಿಯಾಗುತ್ತದೆ.
ಕಳೆದ ವಾರ ಪ್ರಕಟಣೆ ಹೊರಡಿಸಿರುವ ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಖಾತೆಗಳಿಗೆ ಪ್ಯಾನ್ ಸಂಖ್ಯೆಯನ್ನು ನೇರವಾಗಿ ಸಂಪರ್ಕಿಸಿ ತೆರಿಗೆ ಮರುಪಾವತಿಯನ್ನು ಪಡೆಯಬಹುದು. ಮಾರ್ಚ್ 1ರಿಂದ ಈ ನಿಯಮ ಜಾರಿಗೆ ಬಂದಿದ್ದು ಆದಾಯ ತೆರಿಗೆ ಮೊತ್ತ ಬ್ಯಾಂಕ್ ಖಾತೆಗೆ ಇ ವರ್ಗಾವಣೆ ಮೂಲಕ ಮಾತ್ರ ಮರುಪಾವತಿಯಾಗುತ್ತಿದ್ದು ಅದಕ್ಕೆ ಪ್ಯಾನ್ ಸಂಖ್ಯೆಯನ್ನು ನೀಡಬೇಕು.
ಆದಾಯ ತೆರಿಗೆ ವಿವರ ಸಲ್ಲಿಸಲು ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಕಡ್ಡಾಯ ಮಾಡಿದ್ದು ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಜೋಡಿಸಲು ಮಾರ್ಚ್ 31 ಕಡೆಯ ದಿನ ನಿಗದಿಪಡಿಸಿದೆ.
ಆಧಾರ್-ಪ್ಯಾನ್ ಸಂಖ್ಯೆ ಜೋಡಣೆ: ಆದಾಯ ತೆರಿಗೆ ವಿವರವನ್ನು ಆನ್ ಲೈನ್ ನಲ್ಲಿ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯ ಜೊತೆ ಜೋಡಣೆ ಮಾಡಲು ಮನವಿ ಸಲ್ಲಿಸಬೇಕು. ಆನ್ ಲೈನ್ ನಲ್ಲಿ ಸಲ್ಲಿಕೆ ಮಾಡಲು ಎನ್ ಎಸ್ ಡಿಎಲ್ ಮತ್ತು ಯುಟಿಐಐಟಿಎಸ್ಎಲ್ ವೆಬ್ ಸೈಟ್ ಗಳಲ್ಲಿ ಜೋಡಣೆ ಕೊಂಡಿ ಸಿಗುತ್ತದೆ. ಅಲ್ಲಗೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕೂಡ ಮಾಡಬಹುದು.
ಎಸ್ಎಂಎಸ್ ಮೂಲಕ:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com