ಲಂಡನ್ ನಲ್ಲಿ ನೀರವ್ ಮೋದಿ ಪ್ರತ್ಯಕ್ಷ, ಮತ್ತೆ ಹೊಸ ವಜ್ರದ ಉದ್ಯಮ ಆರಂಭ!

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ, ಉದ್ಯಮಿ ನೀರವ್ ಮೋದಿ ಲಂಡನ್ ನ ವೆಸ್ಟ್ ಎಂಡ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ...
ನೀರವ್ ಮೋದಿ
ನೀರವ್ ಮೋದಿ
ಲಂಡನ್: ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ, ಉದ್ಯಮಿ ನೀರವ್ ಮೋದಿ ಲಂಡನ್ ನ ವೆಸ್ಟ್ ಎಂಡ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು ಅಲ್ಲಿ ಹೊಸ ವಜ್ರದ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ನೀರವ್ ಮೋದಿಯನ್ನು ಸಂದರ್ಶನ ಮಾಡಿದ ವಿಡಿಯೊವನ್ನು ಇಂಗ್ಲೆಂಡಿನ ದ ಟೆಲಿಗ್ರಾಫ್ ಪ್ರಕಟಿಸಿದ್ದು ಪತ್ರಿಕೆಯ ಪ್ರತಿನಿಧಿ ಕೇಳಿದ ಯಾವುದೇ ಪ್ರಶ್ನೆಗಳಿಗೂ ನೀರವ್ ಮೋದಿ ಉತ್ತರಿಸದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಭಾರತಕ್ಕೆ ಬೇಕಾಗಿರುವ ಸುಮಾರು 1.5 ಶತಕೋಟಿ ರೂಪಾಯಿ ವಂಚನೆ ಪ್ರಕರಣದ ಉದ್ಯಮಿ ನೀರವ್ ಮೋದಿ ಮುಕ್ತವಾಗಿ ಲಂಡನ್ ನಲ್ಲಿ ವಾಸಿಸಿಕೊಂಡು ಓಡಾಡಿಕೊಂಡಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
48 ವರ್ಷದ ಉದ್ಯಮಿ ನೀರವ್ ಮೋದಿಯನ್ನು ಗಡೀಪಾರು ಮಾಡುವಂತೆ ಭಾರತ ಸರ್ಕಾರ ಮನವಿ ಮಾಡಿದ್ದು ಇಂಟರ್ ಪೊಲ್ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿದೆ. ಈತ ಲಂಡನ್ ನ ಐಷಾರಾಮಿ ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲಿ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿದ್ದು ಹೊಸ ವಜ್ರೋದ್ಯಮವನ್ನು ಆರಂಭಿಸಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.
ನೀರವ್ ಮೋದಿಯ ಈಗಿನ ಚಹರೆ ಬದಲಾಗಿದ್ದು ದಪ್ಪ ಮೀಸೆ ಬೆಳೆಸಿಕೊಂಡಿದ್ದಾನೆ. ಗಡೀಪಾರಿನಿಂದ ತಪ್ಪಿಸಿಕೊಳ್ಳಲು ನೀರವ್ ಮೋದಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತನ್ನ ನೋಟವನ್ನು ಬದಲಿಸಿಕೊಂಡಿರಬಹುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿದ್ದವು.
ಲಂಡನ್ ನ ಐಷಾರಾಮಿ ಟೊಟ್ಟೆನ್ ಹಾಮ್ ಕೋರ್ಟ್ ರಸ್ತೆಯಲ್ಲಿ ಮೂರು ಬೆಡ್ ರೂಂಗಳ ವರ್ಷಕ್ಕೆ ಸುಮಾರು 8 ಮಿಲಿಯನ್ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ನೀರವ್ ಮೋದಿ ನೆಲೆಸಿದ್ದಾನೆ, ಅಲ್ಲಿ ಹೊಸ ವಜ್ರದ ಉದ್ಯಮ ಆರಂಭಿಸಿದ್ದು ಅದರ ಕಚೇರಿ ಅಪಾರ್ಟ್ ಮೆಂಟ್ ಗೆ ಹೊಂದಿಕೊಂಡಂತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಈ ಉದ್ಯಮ ಆರಂಭಿಸಿದ್ದಾನೆ.
ಲಂಡನ್ ನ ಉದ್ಯೋಗ ಮತ್ತು ಪಿಂಚಣಿ ಇಲಾಖೆಯಿಂದ ಇತ್ತೀಚೆಗೆ ವಿಮೆ ಸಂಖ್ಯೆಯನ್ನು ನೀರವ್ ಪಡೆದುಕೊಂಡಿದ್ದು ಲಂಡನ್ ನಲ್ಲಿ ಬ್ಯಾಂಕ್ ಖಾತೆ ತೆರೆದು ಆನ್ ಲೈನ್ ನಲ್ಲಿ ವಹಿವಾಟು ನಡೆಸುತ್ತಿದ್ದಾನೆ. ಲಂಡನ್ ನ ಶ್ರೀಮಂತ ಉದ್ಯಮಿಗಳ ಜೊತೆ ಸಂಪರ್ಕದಲ್ಲಿದ್ದಾನೆ. ಅವರಿಂದ ಉದ್ಯಮದ ಸಲಹೆ ಪಡೆಯುತ್ತಿರುತ್ತಾನೆ ಎಂದು ಕೂಡ ಟೆಲಿಗ್ರಾಫ್ ತನ್ನ ವರದಿಯಲ್ಲಿ ಪ್ರಕಟಿಸಿದೆ.
ಇಂಗ್ಲೆಂಡ್ ಸರ್ಕಾರ ನೀರವ್ ಮೋದಿಗೆ ರಾಷ್ಟ್ರೀಯ ವಿಮಾ ಸಂಖ್ಯೆಯನ್ನು ಹೇಗೆ ಮತ್ತು ಏಕೆ ನೀಡಿತು ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ ಎಂದಿರುವ ಪತ್ರಿಕೆಯ ವರದಿ, ಭಾರತ ಸರ್ಕಾರದ ಇಂಟರ್ ಪೋಲ್ ರೆಡ್ ನೊಟೀಸ್ ಗೆ ಇನ್ನೂ ಇಂಗ್ಲೆಂಡ್ ಸರ್ಕಾರ ಉತ್ತರಿಸಿಲ್ಲ. ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಬೇಕೆಂದರೆ ಅಥವಾ ಉದ್ಯಮ ನಡೆಸಬೇಕೆಂದರೆ ರಾಷ್ಟ್ರೀಯ ವಿಮಾ ಸಂಖ್ಯೆ ಹೊಂದಿರಬೇಕಾಗುತ್ತದೆ.
ಉದ್ಯಮಿ ನೀರವ್ ಮೋದಿಯನ್ನು ಗಡೀಪಾರು ಮಾಡುವಂತೆ ಭಾರತ ಸರ್ಕಾರ ಕಳೆದ ವರ್ಷ ಆಗಸ್ಟ್ ನಲ್ಲಿಯೇ ಮನವಿ ಮಾಡಿಕೊಂಡಿತ್ತು. ಅದು ಇಂಗ್ಲೆಂಡಿನ ಗೃಹ ಕಾರ್ಯದರ್ಶಿಗಳ ಕಚೇರಿಯಲ್ಲಿದ್ದು ಭಾರತದಿಂದ ಇಂತಹದ್ದೊಂದು ಮನವಿ ಬಂದಿದೆ ಎಂದು ಅಲ್ಲಿನ ಗೃಹ ಕಾರ್ಯದರ್ಶಿಗಳಾಗಲಿ, ಗೃಹ ಕಚೇರಿಯಾಗಲಿ ಇದುವರಗೆ ದೃಢಪಡಿಸಿಲ್ಲ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 6,498.20 ಕೋಟಿ ರೂಪಾಯಿ ವಂಚನೆ ಎಸಗಿರುವ ಆರೋಪ ಕಳೆದ ವರ್ಷ ಫೆಬ್ರವರಿಯಲ್ಲಿ ನೀರವ್ ಮೋದಿ ವಿರುದ್ಧ ಕೇಳಿ ಬಂದಿತ್ತು. ಮೋಸದಿಂದ ಬ್ಯಾಂಕಿನಿಂದ ಹಣವನ್ನು ಸಾಲ ಪಡೆದು ಇದುವರೆಗೆ ಹಿಂತಿರುಗಿಸದೆ ವಿದೇಶಕ್ಕೆ ಪರಾರಿಯಾಗಿದ್ದನು. ಈ ವಂಚನೆ ಪ್ರಕರಣ ಬೆಳಕಿಗೆ ಬರುವ ಹೊತ್ತಿಗೆ ನೀರವ್ ಮೋದಿ ಭಾರತದಲ್ಲಿ ಇರಲಿಲ್ಲ. ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಆತನ ಪಾಸ್ ಪೋರ್ಟ್ ನ್ನು ಮುಟ್ಟುಗೋಲು ಹಾಕಲಾಯಿತು.
ನೀರವ್ ಮೋದಿ ಮತ್ತು ಆತನ ಸಹಚರ ಸಂಬಂಧಿಕ ಮೆಹುಲ್ ಚೊಕ್ಸಿ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಅವರ ವಿರುದ್ಧ ಅಕ್ರಮವಾಗಿ ಹಣ ವರ್ಗಾವಣೆ ಕೇಸು ದಾಖಲಿಸಿದ್ದು ಕಳೆದ ವರ್ಷ ಫೆಬ್ರವರಿ 15ರಂದು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದೆ.
Exclusive: Telegraph journalists tracked down Nirav Modi, the billionaire diamond tycoon who is a suspect for the biggest banking fraud in India's historyhttps://t.co/PpsjGeFEsy pic.twitter.com/v3dN5NotzQ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com