18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು, ಬಿಎಸ್ಎನ್ಎಲ್ ನೌಕರರಿಗೆ ಸಂಬಳ ವಿಳಂಬ!

ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ ಬಿಎಸ್ಎನ್ಎಲ್ 18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತನ್ನ ನೌಕರರಿಗೆ ವೇತನ ವಿಳಂಬ ಮಾಡಿದ್ದರಿಂದ ಸಂಸ್ಥೆಯ 1.68 ಲಕ್ಷ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ ಬಿಎಸ್ಎನ್ಎಲ್ 18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತನ್ನ ನೌಕರರಿಗೆ ವೇತನ ವಿಳಂಬ ಮಾಡಿದ್ದರಿಂದ ಸಂಸ್ಥೆಯ 1.68 ಲಕ್ಷ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು.. 18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ (ಬಿಎಸ್​ಎನ್​ಎಲ್) ತನ್ನ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಇದರಿಂದ ಬಿಎಸ್​ಎನ್​ಎಲ್ ನ 1.68 ಲಕ್ಷ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲಗಳ ಪ್ರಕಾರ ಕೇವಲ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು ಮಾತ್ರವಲ್ಲದೇ ಸಂಸ್ಥೆಯ ಖಾಯಂ ಸಿಬ್ಬಂದಿಗಳೂ ವೇತನವೂ ಆಗಿಲ್ಲ ಎನ್ನಲಾಗಿದೆ.
ಕೆಲ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನ ಸಿಕ್ಕಿಲ್ಲ. ಇನ್ನೂ ಕೆಲವರಿಗೆ ಕಳೆದ ಆರು ತಿಂಗಳಿಂದ ಒಂದೇ ಒಂದು ರೂಪಾಯಿಯೂ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಸಂಸ್ಥೆ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಬಿಎಸ್ಎನ್ಎಲ್ ಮಾತ್ರವಲ್ಲದೇ ಅದರ ಸಹೋದರ ಸಂಸ್ಥೆ ಎಂಟಿಎನ್ಎಲ್ ಸಂಸ್ಥೆಯ ಸಿಬ್ಬಂದಿಗೂ ವೇತನ ನೀಡಿಲ್ಲ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ, 'ಫೆ.28ರಂದೇ ವೇತನ ಪಾವತಿ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ, ಈಗ ಕೆಲವೇ ರಾಜ್ಯಗಳಲ್ಲಿರುವ ಸಿಬ್ಬಂದಿಗೆ ಸಂಬಂಧ ನೀಡಲಾಗುತ್ತಿದೆ. ಆದಾಯ ಬಂದ ನಂತರದಲ್ಲಿ ಉಳಿದ ರಾಜ್ಯಗಳಲ್ಲಿರುವ ಸಿಬ್ಬಂದಿಗೆ ವೇತನ ನೀಡಲಾಗುತ್ತದೆ' ಎಂದು ಸಂಸ್ಥೆ ಹೇಳಿದೆ. ಈಗಿರುವ ನಿಯಮಗಳ ಪ್ರಕಾರ ವೇತನ ನೀಡಲು ಸಂಸ್ಥೆ ಸಾಲ ತೆಗೆದುಕೊಳ್ಳುವಂತಿಲ್ಲ. ಹಾಗಾಗಿ, ವೇತನ ನೀಡಲು ಕೊಂಚ ತಡವಾಗಲಿದೆ ಎನ್ನಲಾಗಿದೆ. ಸಂಸ್ಥೆ ಭಾರೀ ನಷ್ಟದಲ್ಲಿರುವುದರಿಂದ ಉದ್ಯೋಗ ಕಡಿತಗೊಳಿಸಲು ಸಂಸ್ಥೆ ನಿರ್ಧರಿಸಿದೆ ಎನ್ನುವ ವಿಚಾರ ಹರಿದಾಡುತ್ತಿದೆ.
ಎಂಟಿಎನ್ಎಲ್ ನ ಸುಮಾರು 8 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ವಿಆರ್ ಎಸ್ ನೀಡಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ. ಪ್ರಸ್ತುತ ಬಿಎಸ್ಎನ್ಎಲ್ ಸಂಸ್ಥೆ ಮಾಸಿಕ 750 ಕೋಟಿ ಆದಾಯ ಹೊಂದಿದ್ದು, ಸುಮಾರು 13 ಸಾವಿರ ಕೋಟಿ ರೂ ಸಾಲ ಹೊಂದಿದೆ. ಅಂತೆಯೇ 4ಜಿ ತರಂಗಾಂತರ ಮಾರಾಟದ ಮೂಲಕ ಸಂಸ್ಥೆಗೆ ಸುಮಾರು 6,767 ಆದಾಯ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com