ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ಧಿ, ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ವಿಥ್ ಡ್ರಾ ಸೌಲಭ್ಯ

ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಇದೇ ಮೊದಲ ಬಾರಿಗೆ ಯೊನೊ ( YONO) ಆಪ್ ಮೂಲಕ ದೇಶದಲ್ಲಿನ 16 ಸಾವಿರ 500 ಎಟಿಎಂಗಳಿಂದ ಕಾರ್ಡ್ ರಹಿತವಾಗಿ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

Published: 15th March 2019 12:00 PM  |   Last Updated: 15th March 2019 10:32 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ನವದೆಹಲಿ: ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿನ ಸುಮಾರು 16 ಸಾವಿರ 500 ಎಟಿಎಂಗಳಿಂದ ಯೊನೊ ಆಪ್ ಮೂಲಕ ಕಾರ್ಡ್ ರಹಿತ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

'ಯೊನೊ ಕ್ಯಾಷ್ ಪಾಯಿಂಟ್ಸ್ ' ಎಂದು ಕರೆಯಲಾಗುವ ಈ ವ್ಯವಸ್ಥೆಯಿಂದಾಗಿ ಸ್ಕಿಮಿಂಗ್ ಮತ್ತು ಕ್ಲೋನಿಂಗ್ ಸಮಸ್ಯೆ ನಿವಾರಣೆಯಾಗಲಿದೆ.  ಈ ವ್ಯವಸ್ಥೆಯನ್ನು  ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಹಣ ಡ್ರಾ ಮಾಡಲು ಯೊನೊ ಆಪ್ ಬಳಸುವ  ಕ್ರಮ
ಈ ಸೇವೆಯ ಮೂಲಕ ಹಣ ಪಡೆಯುವ ಪ್ರಕ್ರಿಯೆಯು ಎರಡು ಅಂಶದ ದೃಢೀಕರಣವನ್ನು ಒಳಗೊಂಡಿದ್ದು, ಗ್ರಾಹಕರು ಯೊನೊ ಆಪ್ ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ವ್ಯವಹಾರಕ್ಕಾಗಿ ಪಿನ್  ಸೆಟ್ಟಿಂಗ್ ಮಾಡಬೇಕಾಗುತ್ತದೆ.

ಅಂಡ್ರಾಯ್ಡ್ ಮತ್ತು ಐಒಎಸ್ ಪವರ್ ಮೊಬೈಲ್ ಪೋನುಗಳನ್ನು ಹೊರತುಪಡಿಸಿದಂತೆ ಯೊನೊ ವೆಬ್ ಸೈಟ್ ಮೂಲಕ ಇದನ್ನು ಪಡೆದುಕೊಳ್ಳಬಹುದಾಗಿದೆ.

ನಗದು ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದ ನಂತರ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಆರು ಸಂಖ್ಯೆಯ ವಿವರಣೆ ಸಂಖ್ಯೆಯೊಂದಿಗೆ ಎಸ್ ಎಂಎಸ್ ಪಡೆಯುತ್ತಾರೆ. ಬಳಸುತ್ತಿರುವ ನೋಂದಾಯಿತ ಮೊಬೈಲ್ ನಂಬರ್ ಗೆ ಆರು ಸಂಖ್ಯೆಯ ಎಸ್ ಎಂಎಸ್ ಬರುತ್ತದೆ. ಇದಾದ ಕೆಲ ನಿಮಿಷಗಳಲ್ಲಿ ಪಿನ್ ಸಂಖ್ಯೆ  ಜೊತೆಗೆ ಹಣವೂ ಬರುತ್ತದೆ.

ಈ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್,  ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿಸಲು ಹಾಗೂ ಗರಿಷ್ಟ ಜನರನ್ನು ತಲುಪುವ ನಿಟ್ಟಿನಲ್ಲಿ ಯೊನೊ ಕ್ಯಾಷ್ ಮತ್ತೊಂದು ಹೆಜ್ಜೆಯಾಗಿದೆ.ಇದರ ಮೂಲಕ ಡೆಬಿಟ್ ಕಾರ್ಡ್ ಬಳಸದೆಯೂ  ಗ್ರಾಹಕರು ನಗದು ವಿಥ್ ಡ್ರಾ ಮಾಡಿಕೊಳ್ಳಬಹುದು,ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಸ್ನೇಹಿ ವ್ಯವಸ್ಥೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp