ಎರಿಕ್ಸನ್‌ ಇಂಡಿಯಾ ಪ್ರಕರಣ: ನೆರವು ನೀಡಿದ ಸಹೋದರ ಮುಖೇಶ್ ಅಂಬಾನಿಗೆ ಅನಿಲ್ ಅಂಬಾನಿ ಧನ್ಯವಾದ!

ಬಿಲಿಯನೇರ್ ಉದ್ಯಮಿ ಅನಿಲ್ ಅಂಬಾನಿ ತನ್ನ ನೆರವಿಗೆ ಧಾವಿಸಿದ ಮುಖೇಶ್ ಅಂಬಾನಿಗೆ ಸಹೋದರ ಅನಿಲ್ ಅಂಬಾನಿ ಧನ್ಯವಾದ ತಿಳಿಸಿದ್ದಾರೆ.

Published: 19th March 2019 12:00 PM  |   Last Updated: 19th March 2019 12:26 PM   |  A+A-


Ericsson payout case: Mukesh Ambani comes to brother Anil's rescue day before SC deadline

ಎರಿಕ್ಸನ್‌ ಇಂಡಿಯಾ ಪ್ರಕರಣ: ನೆರವು ನೀಡಿದ ಸಹೋದರ ಮುಖೇಶ್ ಅಂಬಾನಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ

Posted By : SBV SBV
Source : Online Desk
ನವದೆಹಲಿ: ಬಿಲಿಯನೇರ್ ಉದ್ಯಮಿ ಅನಿಲ್ ಅಂಬಾನಿ ತನ್ನ ನೆರವಿಗೆ ಧಾವಿಸಿದ ಮುಖೇಶ್ ಅಂಬಾನಿಗೆ ಸಹೋದರ ಅನಿಲ್ ಅಂಬಾನಿ ಧನ್ಯವಾದ ತಿಳಿಸಿದ್ದಾರೆ. 

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮುಂಚಿತವಾಗಿಯೇ ಎರಿಕ್ಸನ್‌ ಇಂಡಿಯಾ ಕಂಪನಿಗೆ 458.77 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. 

ಎರಿಕ್ಸನ್ ಇಂಡಿಯಾ ಕಂಪನಿಗೆ 458.77 ಕೋಟಿಗಳನ್ನು ಪಾವತಿ ಮಾಡುವುದಕ್ಕೆ ಅನಿಲ್ ಅಂಬಾನಿಗೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ನೆರವು ನೀಡಿದ್ದರು. 

ನನಗೆ ಸಮಯೋಚಿತ ನೆರವು ನೀಡಿದ ನನ್ನ ಹಿರಿಯ ಸಹೋದರ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ಹೃದಯಪೂರ್ವಕ ಧನ್ಯವಾದಗಳು, ನಾನು ಮತ್ತು ನನ್ನ ಕುಟುಂಬ ಇದಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. 

ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್ಸನ್ ಗೆ ಮುಂದಿನ 4 ವಾರಗಳೊಳಗೆ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಅನಿಲ್ ಅಂಬಾನಿಗೆ ಎಚ್ಚರಿಕೆ ನೀಡಿತ್ತು. ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ಗೆ (ಎಡಿಎಜಿ) ರಫೆಲ್‌ ಜೆಟ್‌ ಡೀಲ್‌ನಲ್ಲಿ ಹೂಡಿಕೆ ಮಾಡಲು ದುಡ್ಡಿದೆ. ಆದರೆ ತನಗೆ ಕೊಡಬೇಕಿರುವ 550 ಕೋಟಿ ರೂ. ಬಾಕಿ ನೀಡಲು ಸತಾಯಿಸುತ್ತಿದೆ ಎಂದು ಎರ್ರಿಕ್ಸನ್‌ ದೂರಿತ್ತು.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp