ಐಷಾರಾಮಿ ಬದುಕಿನಿಂದ ಜೈಲಿನವರೆಗೆ; ನೀರವ್ ಮೋದಿಯ ಕರಾಳ 'ಹೋಳಿ'

ಅಕ್ರಮ ಹಣ ವರ್ಗಾವಣೆ ಮತ್ತು ಬ್ಯಾಂಕಿನಿಂದ ಹಣ ವಂಚನೆ ಆರೋಪದಲ್ಲಿ ಭಾರತದಲ್ಲಿ ವಿಚಾರಣೆ ...
ನೀರವ್ ಮೋದಿ
ನೀರವ್ ಮೋದಿ
ಲಂಡನ್: ಅಕ್ರಮ ಹಣ ವರ್ಗಾವಣೆ ಮತ್ತು ಬ್ಯಾಂಕಿನಿಂದ ಹಣ ವಂಚನೆ ಆರೋಪದಲ್ಲಿ ಭಾರತದಲ್ಲಿ ವಿಚಾರಣೆ ಎದುರಿಸಬೇಕಾಗಿರುವ ವಜ್ರೋದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ಬಂಧಿಯಾಗಿದ್ದು ಈ ಬಾರಿಯ ಹೋಳಿ ಹಬ್ಬವನ್ನು ಜೈಲಿನಲ್ಲಿ ತುಂಬಿದ ಜನಜಂಗುಳಿಯ ಆರೋಪಿಗಳ ಮಧ್ಯೆ ಆಚರಿಸಬೇಕಾಯಿತು, ಇಂಗ್ಲೆಂಡ್ ಕೋರ್ಟ್ ನ ನ್ಯಾಯಾಧೀಶರು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಕಳೆದ ಮಂಗಳವಾರ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರಿಂದ ಬಂಧನಕ್ಕೊಳಗಾದ 48 ವರ್ಷದ ಉದ್ಯಮಿ ನೀರವ್ ಮೋದಿ ಅವರನ್ನು ಬುಧವಾರ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಜಿಲ್ಲಾ ನ್ಯಾಯಾಧೀಶೆ ಮೇರಿ ಮಲ್ಲನ್ ಹಾಜರುಪಡಿಸಿದರು. ಅಲ್ಲದೆ ಮಾರ್ಚ್ 29ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದಾರೆ. ನಂತರ ನೈರುತ್ಯ ಲಂಡನ್ ನಲ್ಲಿರುವ ಮ್ಯಾಜೆಸ್ಟಿ ಜೈಲಿಗೆ ವರ್ಗಾಯಿಸಲಾಗುತ್ತದೆ.
ಜೈಲಿನಲ್ಲಿ ಪ್ರತ್ಯೇಕ ಕೋಣೆ, ಐಷಾರಾಮಿ ಆತಿಥ್ಯ ನಿರೀಕ್ಷಿಸಿದ್ದ ನೀರವ್ ಮೋದಿಗೆ ಅಲ್ಲಿ ಕೂಡ ನಿರಾಸೆಯಾಗಿದೆ. ಕೈದಿಗಳು ಅಪಾರವಾಗಿರುವುದರಿಂದ ಪ್ರತ್ಯೇಕ ಕೊಠಡಿ ಸಿಕ್ಕಿಲ್ಲ. ಇತರ 1430 ಪುರುಷ ಕೈದಿಗಳ ಜೊತೆಯೇ ಇರಬೇಕಾಗಿ ಬಂದಿದೆ. ಭಾರತದ ಆಗರ್ಭ ಶ್ರೀಮಂತ, ಐಷಾರಾಮಿ ಸೆಲೆಬ್ರಿಟಿಗಳ ಮಧ್ಯೆ ಓಡಾಟದ ಜೀವನ ಕಂಡಿದ್ದ ನೀರವ್ ಮೋದಿಗೆ ಬದುಕು ಈಗ ನಿಜಕ್ಕೂ ಕಠಿಣವಾಗಿದೆ.
ನೀರವ್ ಮೋದಿ ಈಗಿರುವುದು ರಾಣಿ ವಿಕ್ಟೋರಿಯಾ ಕಾಲದಲ್ಲಿ ನಿರ್ಮಿಸಿದ ಕಾರಾಗೃಹದಲ್ಲಿ, ಇದು ಇಂಗ್ಲೆಂಡ್ ಮತ್ತು ವೇಲ್ ಸಿಟಿಯಲ್ಲಿ ಅತ್ಯಂತ ಹೆಚ್ಚು ಕೈದಿಗಳು ತುಂಬಿರುವ ಜಾಗ. ಮಾದಕ ವಸ್ತು ವ್ಯಸನ ಮತ್ತು ಮಾನಸಿಕ ಅನಾರೋಗ್ಯ ಹೊಂದಿರುವ ಕೈದಿಗಳೇ ಇಲ್ಲಿ ಹೆಚ್ಚಾಗಿರುವುದು. ಇವರ ಹಿನ್ನಲೆ ಕಳಪೆ ಮಟ್ಟದ್ದೇ. ಜೈಲಿನ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ ಎಂದು ಅಲ್ಲಿನ ತಪಾಸಣೆ ಅಧಿಕಾರಿಗಳೇ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com