ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳ

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ) 14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.
ಎಲ್ಪಿಜಿ
ಎಲ್ಪಿಜಿ
ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ)  14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.
ದೆಹಲಿಯಲ್ಲಿ 28 ಪೈಸೆ, ಮುಂಬೈನಲ್ಲಿ  29 ಪೈಸೆ ಹೆಚ್ಚಳ ಮಾಡಲಾಗಿದ್ದು ಹೊಸದರ ಪಟ್ಟಿಯಂತೆ ಎರಡೂ ಮೆಟ್ರೋ ಸಿಟಿಗಳಲ್ಲಿ ಸಬ್ಸಿಡಿ ರಹಿತ  ಸಿಲೆಂಡರ್ ದರ 6 ರೂಪಾಯಿ ಹೆಚ್ಚಳ ಆಗಿದೆ.
ಸಬ್ಸಿಡಿ ಇಲ್ಲದ ಎಲ್ಪಿಜಿ ಸಿಲಿಂಡರ್ ದರ ಇದೀಗ ನವದೆಹಲಿಯಲ್ಲಿ  712.5 ರೂ., ಮುಂಬೈನಲ್ಲಿ 684.50 ರೂ., ಕೋಲ್ಕತಾದಲ್ಲಿ 738.50 ರೂ. ಮತ್ತು ಚೆನ್ನೈನಲ್ಲಿ 728 ರೂ. ಆಗಿದೆ.
ಸಬ್ಸಿಡಿ ಸಹಿತ ಎಲ್ಪಿಜಿ  ಸಿಲೆಂಡರ್ ಬೆಲೆ ದೆಹಲಿಯಲ್ಲಿ 496.14 ರೂ., ಕೋಲ್ಕತಾದಲ್ಲಿ 499.29 ರೂ., ಮುಂಬೈನಲ್ಲಿ 493.86 ರೂ. ಮತ್ತು ಚೆನ್ನೈನಲ್ಲಿ 484.02 ರೂ. ಇರಲಿದೆ.
ದೇಶದಲ್ಲಿ ಇಂಡೆನ್ ಬ್ರ್ಯಾಂಡ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಬಹುದೊಡ್ಡ ವಿತರಣಾ ಸಂಸ್ಥೆ ಇಂಡಿಯನ್ ಆಯಿಲ್ ಎನಿಸಿದೆ. ಗ್ರಾಹಕರು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಅಡುಗೆ ಇಂಧನ ಖರೀದಿಸಬೇಕು, ಆಗ ವರ್ಷಕ್ಕೆ 12 ಸಿಲೆಂಡರ್ ಗಳಿಗೆ ಸಬ್ಸಿಡಿ ನೀಡಲಾಗುತ್ತದೆ, ಆ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಈ ಸಬ್ಸಿಡಿ ಮೊತ್ತ ಅಂತರಾಷ್ಟ್ರೀಯ ಸರಾರಸಿ ಬೆಂಚ್ ಮಾರ್ಕ್ ಎಲ್ಪಿಜಿ ದರ ಹಾಗೂ ದೇಶಿ ವಿನಿಮಯ ದರದಲ್ಲಿ ಬದಲಾವಣೆಗಳನ್ನು ಅವಲಂಬಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com