ಸತತ 3ನೇ ದಿನ ಕುಸಿದ ಸೆನ್ಸೆಕ್ಸ್, 38,963.26ಕ್ಕೆ ವಹಿವಾಟು ಅಂತ್ಯ

ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ವಹಿವಾಟು.....
ಸತತ 3ನೇ ದಿನ ಕುಸಿದ ಸೆನ್ಸೆಕ್ಸ್, 38,963.26ಕ್ಕೆ ವಹಿವಾಟು ಅಂತ್ಯ
ಸತತ 3ನೇ ದಿನ ಕುಸಿದ ಸೆನ್ಸೆಕ್ಸ್, 38,963.26ಕ್ಕೆ ವಹಿವಾಟು ಅಂತ್ಯ
ಮುಂಬೈ: ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ವಹಿವಾಟು ದಿನವಾದ ಶುಕ್ರವಾರವೂ ಕುಸಿತ ಕಂಡಿದ್ದು, ದಿನದಂತ್ಯಕ್ಕೆ 18.17 ಅಂಕ ಕುಸಿತದೊಂದಿಗೆ 38,963.26ಕ್ಕೆ ಇಳಿದು 39 ಸಾವಿರದ ಮಟ್ಟಕ್ಕೂ ಕೆಳಗಿಳಿದಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)  ಸೂಚ್ಯಂಕ ನಿಫ್ಟಿ ಸಹ 12.50 ಅಂಕ ಇಳಿಕೆಯೊಂದಿಗೆ 11,712.25ಕ್ಕೆ ಇಳಿದಿದೆ. 
ಗುರುವಾರ 50.12 ಅಂಕ ಇಳಿಕೆ ಕಂಡಿದ್ದ  ಸೆನ್ಸೆಕ್ಸ್, ಇಂದು ಆರಂಭಿಕ ವಹಿವಾಟಿನಲ್ಲಿ 26 ಅಂಕ 39,009.55 ಕ್ಕೆ ತಲುಪಿತ್ತು. ನಂತರ ಇಳಿಮುಖವಾಗಿಯೇ ಸಾಗಿದ ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 192 ಅಂಕ ಏರಿಕೆಯೊಂದಿಗೆ 39,172.76ಕ್ಕೆ ಮುಟ್ಟಿತ್ತು. ಬಳಿಕ ಇಳಿಮುಖವಾಗಿಯೇ ಸಾಗಿದ ಸೆನ್ಸೆಕ್ಸ್ ದಿನದಂತ್ಯಕ್ಕೆ 38,963.26ರಲ್ಲಿ ವಹಿವಾಟು ಮುಗಿಸಿತು.
ಸರಕು, ಎಫ್ಎಂಸಿಜಿ, ಆರೋಗ್ಯ ರಕ್ಷಣೆ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯದ ಷೇರುಗಳು ಸೂಚ್ಯಂಕ ಏರಿಕೆಗೆ ಅಡ್ಡಿಯಾದವು. ಟಿಸಿಎಸ್, ಎಚ್ಎಲ್ಎಲ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಷೇರುಗಳುಗಳು ತೀವ್ರ ಮಾರಾಟ ಒತ್ತಡಕ್ಕೆ ಒಳಗಾದವು.
ಆದರೂ, ರಿಯಾಲ್ಟಿ, ಪವರ್ ಗ್ರಿಡ್‍, ಆಟೋ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳಿಗೆ ಹೆಚ್ಚಿನ ಖರೀದಿ ಬೆಂಬಲ ವ್ಯಕ್ತವಾದ್ದರಿಂದ ಸೂಚ್ಯಂಕ ಮತ್ತಷ್ಟು ಕುಸಿಯುವುದನ್ನು ತಡೆದಿವೆ ಎಂದು ದಲ್ಲಾಳಿಗಳು ತಿಳಿಸಿದ್ದಾರೆ.
ಒಟ್ಟಾರೆ, ಮುಂಬೈ ಷೇರು ಮಾರುಕಟ್ಟೆಯ ಗಾತ್ರ ಋಣಾತ್ಮಕವಾಗಿತ್ತು. 1,479 ಕಂಪೆನಿಗಳ ಷೇರುಗಳು ಇಳಿಕೆ ಕಂಡರೆ, 1,031 ಕಂಪೆನಿಗಳ ಷೇರುಗಳು ಏರಿಕೆ ಕಂಡಿವೆ. ಉಳಿದಂತೆ 194 ಕಂಪೆನಿ ಷೇರುಗಳು ತಟಸ್ಥವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com