ಜೆಟ್ ಏರ್ ವೇಸ್ ಮುಂಬೈ ಕಚೇರಿ ಮಾರಾಟಕ್ಕಿಟ್ಟ ಎಚ್ ಡಿಎಫ್ ಸಿ ಬ್ಯಾಂಕ್

ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ನ ಮುಂಬೈ ಕಚೇರಿಯನ್ನು ಸಾಲ ನೀಡಿದ ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕಿಟ್ಟಿದೆ.

Published: 09th May 2019 12:00 PM  |   Last Updated: 09th May 2019 07:48 AM   |  A+A-


HDFC puts Jet Airways' office space for sale

ಸಾಂದರ್ಭಿಕ ಚಿತ್ರ

Posted By : LSB LSB
Source : PTI
ಮುಂಬೈ: ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ನ ಮುಂಬೈ ಕಚೇರಿಯನ್ನು ಸಾಲ ನೀಡಿದ ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕಿಟ್ಟಿದೆ.

ಮುಂಬೈನ ಪ್ರತಿಷ್ಠಿತ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ನಾಲ್ಕನೆ ಮಹಡಿಯಲ್ಲಿರುವ 52,775 ಚದರ ಅಡಿ ವಿಸ್ತೀರ್ಣದ ಜೆಟ್ ಏರ್ವೇಸ್ ಕಚೇರಿಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕೆ ಇಟ್ಟಿದ್ದು, ಅದಕ್ಕೆ 245 ಕೋಟಿ ರುಪಾಯಿ ಬೆಲೆ ನಿಗದಿಪಡಿಸಿದೆ.

ಜೆಟ್ ಏರ್ ವೇಸ್, ಎಚ್ ಡಿಎಫ್ ಸಿ ಬ್ಯಾಂಕ್ ಗೆ 414 ಕೋಟಿ ರುಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದು, ಇದೀಗ ವಿಮಾನ ಸಂಸ್ಥೆಯ ಕಚೇರಿಯನ್ನು ಮಾರಾಟಕ್ಕಿಡಲಾಗಿದೆ.

ಸುಮಾರು 120 ವಿಮಾನಗಳನ್ನು ಹೊಂದಿದ್ದ ಜೆಟ್ ಏರ್ ವೇಸ್ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ಏಪ್ರಿಲ್ 17ರಂದು ಕಾರ್ಯಾಚರಣೆ ಸ್ಥಗಿಗೊಳಿಸಿತ್ತು.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp