ಸತತ ಮೂರನೇ ತಿಂಗಳು ವಾಹನಗಳ ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಜುಕಿ

ಭಾರತ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ...
ಮಾರುತಿ ಸುಜುಕಿ ಇಂಡಿಯಾ
ಮಾರುತಿ ಸುಜುಕಿ ಇಂಡಿಯಾ
ಭಾರತ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐಎಸ್)ದ ಪ್ರಯಾಣಿಕರ ಕಾರಿನ ಮಾರಾಟದಲ್ಲಿ ಕುಸಿತ ಕಂಡುಬಂದ ಹಿನ್ನಲೆಯಲ್ಲಿ ಕಳೆದ ತಿಂಗಳು ಏಪ್ರಿಲ್ ನಲ್ಲಿ ತನ್ನೆಲ್ಲಾ ಕಾರ್ಖಾನೆಗಳಲ್ಲಿ ತಯಾರಿಕೆ ಪ್ರಮಾಣವನ್ನು ಶೇಕಡಾ 10ರಷ್ಟು ಕಡಿತಗೊಳಿಸಿದೆ.
ಈ ಮೂಲಕ ವಾಹನ ಉತ್ಪಾದನೆಯಲ್ಲಿ ಮಾರುತಿ ಸುಜುಕಿ ಸತತ ಮೂರು ತಿಂಗಳಿನಿಂದ ಕಡಿತ ಮಾಡುತ್ತಿದೆ.
ಏಪ್ರಿಲ್ ತಿಂಗಳಲ್ಲಿ ಕಂಪೆನಿ ಒಟ್ಟು 1 ಲಕ್ಷದ 47 ಸಾವಿರದ 669 ವಾಹನಗಳನ್ನು ತಯಾರಿಸಿದ್ದು ಅವುಗಳಲ್ಲಿ ಸೂಪರ್ ಕ್ಯಾರ್ರಿ ಎಲ್ ಸಿವಿ ಕಳೆದ ವರ್ಷಕ್ಕಿಂತ ಶೇಕಡಾ 9.6ರಷ್ಟು ಕಡಿಮೆಯಾಗಿದ್ದು ಕಳೆದ ವರ್ಷ ಏಪ್ರಿಲ್ ನಲ್ಲಿ 1 ಲಕ್ಷದ 63 ಸಾವಿರದ 368 ವಾಹನಗಳನ್ನು ತಯಾರಿಸಿತ್ತು ಎಂದು ತಿಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಕುಸಿತ ಕಂಡು ಬಂದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸಹ ವಾಹನ ಉತ್ಪಾದನೆಯಲ್ಲಿ ಕಡಿತವಾಗಿತ್ತು.
ಕಳೆದ ತಿಂಗಳು ಕಂಪೆನಿಯ ಪ್ರಯಾಣಿಕರ ಕಾರಿನ ಮಾದರಿಯಾದ ಆಲ್ಟೊ, ಸ್ವಿಫ್ಟ್ ಮತ್ತು ಡಿಜೈರ್ ಉತ್ಪಾದನೆಯಲ್ಲಿ ಶೇಕಡಾ 10.3ರಷ್ಟು ಕಡಿಮೆಯಾಗಿದೆ. ಈ ವರ್ಷ 1 ಲಕ್ಷದ 44 ಸಾವಿರದ 702 ಈ ಮಾದರಿಗಳ ಕಾರುಗಳನ್ನು ಉತ್ಪಾದಿಸಿದರೆ ಕಳೆದ ವರ್ಷ ಏಪ್ರಿಲ್ ನಲ್ಲಿ 1 ಲಕ್ಷದ 61 ಸಾವಿರದ 370 ಕಾರುಗಳು ಉತ್ಪಾದನೆಯಾಗಿದ್ದವು. ಯುಟಿಲಿಟಿ ವಾಹನಗಳು ಹೊರತುಪಡಿಸಿ ಬೇರೆ ವಾಹನಗಳ ಉತ್ಪಾದನೆಯನ್ನು ಮಾರುತಿ ಸುಜುಕಿ ಕಂಪೆನಿ ಕಡಿಮೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com