ಮಾರ್ಚ್-ಏಪ್ರಿಲ್‌ನಲ್ಲಿರೂ 3622 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಮಾರಾಟ ನಡೆಸಿದ ಎಸ್ಬಿಐ

ಈ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,622 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ ಎಂಬ ಮಾಹಿತಿ ಆರ್ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಈ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,622 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ ಎಂಬ ಮಾಹಿತಿ ಆರ್ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ಪುಣೆ ಮೂಲದ ವಿಹಾರ್ ದುರ್ವೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಎಸ್ಬಿಐ  ಈ ಮಾಹಿತಿ ನೀಡಿದ್ದು ಂಆರ್ಚ್ ತಿಂಗಳಲ್ಲಿ 365.69 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾರಾಟವಾಗಿದೆ, ಏಪ್ರಿಲ್ ನಲ್ಲಿ ಇದು ಶೇ. 65.21 ರಷ್ಟು ಏರಿಕೆ ಕಂಡಿದ್ದು, 2256.37 ಕೋಟಿ ರೂ. ತಲುಪಿದೆ ಎಂದು ವಿವರಿಸಿದೆ.
ಏಪ್ರಿಲ್ ನಲ್ಲಿ ಹೆಚ್ಚಿನ ಚುನಾವಣಾ ಬಾಂಡ್ ಗಳು ಮಾರಾಟಗೊಂಡಿದ್ದು ಮುಂಬೈನಲ್ಲಿ  694 ಕೋಟಿ ರೂ., ಕೋಲ್ಕತ್ತಾದಲ್ಲಿ 417.31 ಕೋಟಿ ರೂ., ದೆಹಲಿಯಲ್ಲಿ 408.62 ಕೋಟಿ ರೂ. ಮತ್ತು ಹೈದರಾಬಾದ್ ಹಾಗೂ ಇತರೆ ನಗರಗಳಲ್ಲಿ 338.07 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದೆ.
ಹಣಕಾಸು ಸಚಿವಾಲಯ ಒಂದು ನಿರ್ದಿಷ್ಟ ಅವಧಿಗೆ ತಮ್ಮ ಮಾರಾಟದ ಅಧಿಸೂಚನೆಯನ್ನು ಪ್ರಕಟಿಸಿದಾಗ ಬಾಂಡ್ ಗಳ ಎಸ್ಬಿಐ ಶಾಖೆಗಳಲ್ಲಿ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ.
2018 ರಲ್ಲಿ ಕೇಂದ್ರವು ಪ್ರಾರಂಭಿಸಿದ ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ವಿಚಾರಣೆ ಹಂತದಲ್ಲಿದೆ.
ಚುನಾವಣಾ ಬಾಂಡ್ಗಳಿಗೆ ಯಾರು ಅರ್ಹರು?
ಭಾರತದನಾಗರಿಕನಾಗಿರುವ ಅಥವಾ "ಭಾರತದಲ್ಲಿ ನೆಲೆಸಿರುವ ವ್ಯಕ್ತಿ ಈ ಬಾಂಡ್ ಖರೀದಿಗೆ ಅರ್ಹನಾಗುತ್ತಾನೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಘೋಷಿಸಿತ್ತು.ಈ ಬಾಂಡ್ ಗಳು ಕೇವಲ 15 ದಿನಗಳವರೆಗೆ ಮಾತ್ರ ಮಾನ್ಯತೆ ಪಡೆದಿರುತ್ತದೆ. ಅಷ್ಟು ದಿನಗಳಲ್ಲಿ ಅಧಿಕೃತ ಬ್ಯಾಂಕಿನೊಂದಿಗೆ ಖಾತೆಯ ಮೂಲಕ ಅರ್ಹ ರಾಜಕೀಯ ಪಕ್ಷದಿಂದ ಅದನ್ನು ನಗದಾಗಿ ಪರಿವರ್ತಿಸಿಕೊಳ್ಲಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com