ಜೆಟ್ ಏರ್​ವೇಸ್ ಸಿಎಫ್ಒ ಅಮಿತ್ ಅಗರವಾಲ್, ಸಿಇಒ ವಿನಯ್ ದುಬೆ ರಾಜೀನಾಮೆ

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಾರಾಟ ನಿಲ್ಲಿಸಿರುವ ಜೆಟ್ ಏರ್​ವೇಸ್ ವಿಮಾನಯಾನ ಸಂಸ್ಥೆಯ ಸಿಇಒ ವಿನಯ್ ದುಬೆ ಹಾಗೂ ಸಿಎಫ್ ಒ ಅಮಿತ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಾರಾಟ ನಿಲ್ಲಿಸಿರುವ ಜೆಟ್ ಏರ್​ವೇಸ್ ವಿಮಾನಯಾನ ಸಂಸ್ಥೆಯ ಸಿಇಒ ವಿನಯ್ ದುಬೆ ಹಾಗೂ ಸಿಎಫ್ ಒ ಅಮಿತ್ ಅಗರವಾಲ್ ಅವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.
ನಿನ್ನೆಯಷ್ಟೇ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ಒ) ಅಮಿತ್ ಅಗರ್ವಾಲ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಇಒ) ವಿನಯ್ ದುಬೇ ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ಧಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಈ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ವಿಮಾನ ಸಂಸ್ಥೆ ಹೇಳಿದೆ.
ಸುಮಾರು 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಾಲ ಹೊಂದಿರುವ ಜೆಟ್ ಏರ್​ವೇಸ್ ಇತ್ತೀಚಿಗಷ್ಟೇ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು,  ತನ್ನ ನೌಕರರಿಗೆ ನೀಡಲು ಸಂಬಳವೂ ಇಲ್ಲದಂತಾಗಿದೆ. ಪೈಲಟ್​ಗಳು ಸೇರಿದಂತೆ ಸಂಸ್ಥೆಯ ಅನೇಕ ಸಿಬ್ಬಂದಿ ಬೇರೆ ವೈಮಾನಿಕ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com