6 ದಿನ, 6 ಬಾರಿ ಸೆಕ್ಸ್: ಸುಧಾರಿತ ಜೀವನಕ್ಕಾಗಿ ಸಿಬ್ಬಂದಿಗಳಿಗೆ 'ಬಾಬಾ' 'ಜಾಕ್' ಮಂತ್ರ!

ಸುಧಾರಿತ ಜೀವನಕ್ಕಾಗಿ ಏನು ಮಾಡಬೇಕು? ಇದೊಂದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಬಹುತೇಕ ಜನರು ಜೀವನದ ಬಹುಪಾಲು ಸಮಯವನ್ನು ವ್ಯರ್ಥಮಾಡಿಬಿಡುತ್ತಾರೆ. ಇಲ್ಲೊಬ್ಬ ಯಶಸ್ವಿ ಪುರುಷ ಇದಕ್ಕೆ ಸೂಕ್ತ ಮಂತ್ರವನ್ನು ಹೇಳಿದ್ದಾರೆ.

Published: 14th May 2019 12:00 PM  |   Last Updated: 14th May 2019 05:49 AM   |  A+A-


'Sex for six days, six times': Jack Ma's tip for improved life to Alibaba staffers

6 ದಿನ, 6 ಬಾರಿ ಸೆಕ್ಸ್: ಸುಧಾರಿತ ಜೀವನಕ್ಕಾಗಿ ಸಿಬ್ಬಂದಿಗಳಿಗೆ 'ಬಾಬಾ' 'ಜಾಕ್' ಮಂತ್ರ!

Posted By : SBV SBV
Source : The New Indian Express
ಬೀಜಿಂಗ್: ಸುಧಾರಿತ ಜೀವನಕ್ಕಾಗಿ ಏನು ಮಾಡಬೇಕು? ಇದೊಂದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಬಹುತೇಕ ಜನರು ಜೀವನದ ಬಹುಪಾಲು ಸಮಯವನ್ನು ವ್ಯರ್ಥಮಾಡಿಬಿಡುತ್ತಾರೆ. ಇಲ್ಲೊಬ್ಬ ಯಶಸ್ವಿ ಪುರುಷ ಇದಕ್ಕೆ ಸೂಕ್ತ ಮಂತ್ರವನ್ನು ಹೇಳಿದ್ದಾರೆ. 

ಈ ಹಿಂದೆ ಉದ್ಯೋಗಿಗಳಿಗಾಗಿ 996 (ಕೆಲಸ ಮಾಡುವ ಪ್ರದೇಶದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ವರೆಗೆ, 6 ದಿನ) ಸೂತ್ರ ನೀಡಿದ್ದ ಬಾಬ ಈಗ ತಮ್ಮ ಸಿಬ್ಬಂದಿಗಳಿಗೆ ಸುಧಾರಿತ ಜೀವನಕ್ಕಾಗಿ 669 ( 6 ದಿನ, 6 ಬಾರಿ, ಎಷ್ಟು ಹೊತ್ತೆಂಬುದು ಪ್ರಮುಖವಾಗಿರಿಸಿಕೊಂಡು ಲೈಂಗಿಕ ಕ್ರಿಯೆ ನಡೆಸುವುದು) ಸೂತ್ರ ನೀಡಿದ್ದಾರೆ. 

ಡೇಲಿ ಮೇಲ್ ವರದಿಯ ಪ್ರಕಾರ,  ಯಶಸ್ವಿ ಉದ್ಯಮಿ ಆಲಿಬಾಬಾ ಸ್ಥಾಪಕ ಜಾಕ್ ಮಾ, ಅಲಿಬಾಬ  ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಈ ಸೂತ್ರ ನೀಡಿದ್ದಾರೆ.    

ಕೆಲಸದ ವೇಳೆ 996 ಸೂತ್ರ ಪಾಲಿಸಿ, ಜೀವನದಲ್ಲಿ 669 ಸೂತ್ರ ಪಾಲಿಸಿ ಎಂದು ಮಾ ಕಿವಿ ಮಾತು ಹೇಳಿದ್ದಾರೆ. 

ಇದೇ ವೇಳೆ ಜಾಕ್ ಮಾ ಸೂತ್ರಕ್ಕೆ ಪ್ರತಿಯಾಗಿ ಓರ್ವ ಪ್ರಶ್ನೆ ಕೇಳಿದ್ದು ಕಚೇರಿಯಲ್ಲಿ 996 ಸೂತ್ರ ಪಾಲಿಸಿದ ಮೇಲೆ ಮನೆಯಲ್ಲಿ 669 ಸೂತ್ರ ಪಾಲಿಸುವುದಕ್ಕೆ ಈ ಭೂಮಿ ಮೇಲೆ ಯಾರಿಗಾದರೂ ಶಕ್ತಿ ಎಲ್ಲಿರುತ್ತೆ ಸ್ವಾಮಿ ಎಂದು ಕೇಳಿದ್ದಾನೆ. 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp