ಟಾಯ್ಲೆಟ್ ಮ್ಯಾಟ್ ನಲ್ಲಿ ಗಣೇಶನ ಚಿತ್ರ: ಬಾಯ್ಕಾಟ್ ಅಮೆಜಾನ್ ಅಭಿಯಾನ ಆರಂಭ

ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ....
ಟಾಯ್ಲೆಟ್ ಮ್ಯಾಟ್ ಮೇಲೆ ಗಣೇಶ ಚಿತ್ರ
ಟಾಯ್ಲೆಟ್ ಮ್ಯಾಟ್ ಮೇಲೆ ಗಣೇಶ ಚಿತ್ರ
ನೋಯ್ಡಾ: ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಮಹಾತ್ಮ ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕೆ ಮಂದಾಗಿ ಭಾರತೀಯರಿಂದ ಉಗಿಸಿಕೊಂಡಿದ್ದ ಅಮೆಜಾನ್ ಇದೀಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ.
ಶೌಚಗೃಹಗಳಿಗೆ ಬಳಸುವ ಟೈಲ್ಸ್ ಮತ್ತು ಮ್ಯಾಟ್ ಗಳ ಮೇಲೆ ಗಣೇಶನ ಚಿತ್ರ ಹಾಕಿರುವ ಅಮೆಜಾನ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಮೆಜಾನ್ ಬಾಯ್ಕಾಟ್ ಆನ್ ಲೈನ್ ಅಭಿಯಾನ ಆರಂಭವಾಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಅಮೆಜಾನ್ ವಕ್ತಾರ, ಮಾರಾಟಗಾರರು ಕಂಪನಿಯ ಮಾರ್ಗದರ್ಶಿ ಸೂಚಕಗಳನ್ನು ಪಾಲಿಸೂಬೇಕು, ಕಾರ್ಯರೂಪಕ್ಕೆ ತರದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ, ಜೊತೆಗೆ ಅವರ ಖಾತೆಯನ್ನು ವಜಾಗೊಳಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸ್ಟೋರ್ ನಿಂದ ಈ ವಸ್ತುವನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಕರಣ ಸಂಬಂಧ ನೋಯ್ಡಾ ಸೆಕ್ಟರ್ 58 ನಲ್ಲಿ ದೂರು ದಾಖಲಾಗಿದ್ದು, ಈ ಘಟನೆಯಿಂದಾಗಿ  ಎರಡು ಕೋಮುಗಳ ನಡುವೆ ಶತೃತ್ವ ಹೆಚ್ಚಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com