ಎಕ್ಸಿಟ್ ಪೋಲ್ ಗಳಲ್ಲಿ ಎನ್ ಡಿಎಗೆ ಬಹುಮತ: ಮುಂಬೈ ಷೇರುಪೇಟೆ, ರೂಪಾಯಿ ಮೌಲ್ಯದಲ್ಲಿ ಭಾರೀ ಜಿಗಿತ

ದೇಶೀಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೆ ಸಹ ಲೋಕಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್)...

Published: 20th May 2019 12:00 PM  |   Last Updated: 20th May 2019 01:03 AM   |  A+A-


Sensex zooms 942 points as exit polls predict BJP-led NDA's return

ಎಕ್ಸಿಟ್ ಪೋಲ್ ಗಳಲ್ಲಿ ಎನ್ಡಿಎಗೆ ಬಹುಮತ: ಮುಂಬೈ ಷೇರುಪೇಟೆ, ರೂಪಾಯಿ ಮೌಲ್ಯದಲ್ಲಿ ಭಾರೀ ಜಿಗಿತ

Posted By : RHN RHN
Source : The New Indian Express
ಮುಂಬೈದೇಶೀಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೆ ಸಹ ಲೋಕಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಪ್ರಭಾವ ಬೀರಿದೆ.ಎಕ್ಸಿಟ್ ಪೋಲ್ ಫಲಿತಾಂಶದ ಕುರಿತು ಷೇರು ಮಾರುಕಟ್ಟೆ ವಲಯದಲ್ಲಿ ತೃಪ್ತಿ ವ್ಯಕ್ತವಾಗಿದೆ. ಸೋಮವಾರ ಬೆಳಿಗ್ಗೆ ಪ್ರಾರಂಭವಾದ ಬಿಎಸ್ಇ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 900 ಪಾಯಿಂಟ್ ಏರಿಕೆ ಕಂಡಿದ್ದರೆ ರೂಪಾಯಿ ಮೌಲ್ಯ ಸಹ 79 ಪೈಸೆ ಏರಿಕೆ ದಾಖಲಿಸಿದೆ.'

30 ಷೇರು ಸೂಚ್ಯಂಕದಲ್ಲಿ ಲಾಭದಾಯಕ ಏರಿಕೆ ದಾಕಲಾಗಿದ್ದು 687.63 ಪಾಯಿಂಟ್ ಗಳು ಅಥವಾ 1.81 ಶೇಕಡ ಏರಿಕೆಯಾಗಿ ಸೂಚ್ಯಾಂಕ  38,618.40 ಕ್ಕೆ ಏರಿತು. ಇದೇ ರೀತಿ ಎನ್ಎಸ್ಇ ನಿಫ್ಟಿಯು 203.05 ಪಾಯಿಂಟ್ ಅಥವಾ 1.78 ಶೇ.ಏರಿಕ್ಲೆ ದಾಖಲಿಸಿ  11,610.20ಕ್ಕೆ ತಲುಪಿದೆ.. 

ಮಾರುತಿ, ಎಲ್ಆಂಡ್ ಟಿ, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಆರ್ ಐಎಲ್, ಎಂ ಆಂಡ್ ಎಂ, ಇಂಡಸ್ ಇಂಡ್ ಬ್ಯಾಂಕ್, , ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ವೇದಾಂತ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳಲ್ಲಿ ಶೇ. 4 ಏರಿಕೆ ಆಗಿದೆ.

ಮತ್ತೊಂದೆಡೆ ಬಜಾಜ್ ಆಟೋ, ಇನ್ಫೋಸಿಸ್ ಮತ್ತು ಎಚ್ ಸಿಎಲ್ ಟೆಕ್  ಶೇ. 2ರಷ್ಟು ಏರಿಕೆ ದಾಖಲಿಸಿದೆ.

ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 300ಕ್ಕೂ ಹೆಚು ಸ್ಥಾನಗಳನ್ನು ಗಳಿಸಲಿದೆ ಎಂದು ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಇನ್ನೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆಂದೂ ಬಹುತೇಕ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿದೆ.

ದೇಶದಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭೆ ಮಹಾಚುನಾವಣೆ ಫಲಿತಾಂಶ ಗುರುವಾರ ಹೊರಬೀಳಲಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp