ಮತದಾನ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಶಾಕ್, ತೈಲ ಬೆಲೆ ಏರಿಕೆ, ಬೆಂಗಳೂರಿನಲ್ಲಿ ದರ ಎಷ್ಟು?

ಲೋಕಸಭೆ ಚುನಾವಣೆಗೆ ಮತದಾನ ಮುಗಿದಿದ್ದು ಫಲಿತಾಂಶಕ್ಕೆ ಇನ್ನು ಒಂದು ದಿನ ಬಾಕಿ ಇರುವಂತೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲೋಕಸಭೆ ಚುನಾವಣೆಗೆ ಮತದಾನ ಮುಗಿದಿದ್ದು ಫಲಿತಾಂಶಕ್ಕೆ ಇನ್ನು ಒಂದು ದಿನ ಬಾಕಿ ಇರುವಂತೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 72.19 ಡಾಲರ್ ಇದ್ದು ಶೇ 0.22ರಷ್ಟು ಬೆಲೆ ಏರಿಕೆ ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಬೆಲೆಯಲ್ಲಿ 5 ಪೈಸೆ ಏರಿಕೆ ಕಂಡಿದ್ದು ಡೀಸೆಲ್ ನಲ್ಲಿ 9 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 71.17 ರು. ಕೋಲ್ಕತ್ತಾದಲ್ಲಿ 69.36 ರು. ಮುಂಬೈನಲ್ಲಿ 76.78 ರು. ಚೆನ್ನೈನಲ್ಲಿ 73.24 ರು. ಇದೆ. ಡಿಸೇಲ್ ಬೆಲೆ ಮುಂಬೈನಲ್ಲಿ 67.96 ರು. ಕೋಲ್ಕತ್ತಾದಲ್ಲಿ 73.87 ಹಾಗೂ ಚೆನ್ನೈನಲ್ಲಿ 69.97 ರು. ಇದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 5 ಪೈಸೆ ಏರಿಕೆಯಾಗಿದ್ದು 73.49 ರುಪಾಯಿ ಆಗಿದೆ. ಇನ್ನು ಡೀಸೆಲ್ 68.35 ರುಪಾಯಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com