ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ, ಶೇ.5.8ರಷ್ಟು ದಾಖಲು

ಕಳೆದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಶೇ.5.8ರಷ್ಟು ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲೇ...

Published: 31st May 2019 12:00 PM  |   Last Updated: 31st May 2019 07:44 AM   |  A+A-


GDP growth slows to 5-yr low at 5.8%

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ನವದೆಹಲಿ: ಕಳೆದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಶೇ.5.8ರಷ್ಟು ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

2014 - 15ರಿಂದೀಚಿಗೆ ಅತಿ ಕಡಿಮೆ ಜಿಡಿಪಿ ವೃದ್ಧಿ ದರ ಇದಾಗಿದ್ದು, 2013-14ರಲ್ಲಿ ಶೇ.6.4ರಷ್ಟು ದಾಖಲಾಗಿತ್ತು.

2018-19ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ದರಗಳು 37.20 ಲಕ್ಷ ಕೋಟಿ ರೂ.ನಷ್ಟಿತ್ತು ಎಂದು ಅಂದಾಜಿಸಲಾಗಿದೆ. 2017-18ನೇ ಸಾಲಿನಲ್ಲಿ ದರಗಳು 35.15 ಲಕ್ಷ ಕೋಟಿ ರೂ.ನಷ್ಟಿದ್ದು, ಶೇ.5.8ರಷ್ಟು ಪ್ರಗತಿ ದಾಖಲಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ. 

2018-19ನೇ ಸಾಲಿನಲ್ಲಿ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವರ್ಧನೆ(ಜಿವಿಎ) 129.07 ಲಕ್ಷ ಕೋಟಿ ರೂ.ನಷ್ಟು ಅಂದಾಜಿಸಲಾಗಿದ್ದು, ಶೇ.6.6ರಷ್ಟು ಪ್ರಗತಿ ದಾಖಲಾಗಿದೆ. ಜಿವಿಎ ಮೊದಲ ಪರಿಷ್ಕೃತ ಅಂದಾಜಿನಂತೆ 2017-18ರಲ್ಲಿ ಇದು 121.04 ಲಕ್ಷ ಕೋಟಿ ರೂ.ನಷ್ಟಿತ್ತು. ಈ ಅಂಕಿ-ಅಂಶಗಳನ್ನು 2019ರ ಜನವರಿ 31ರಂದು ಬಿಡುಗಡೆ ಮಾಡಲಾಗಿತ್ತು. 

2018-19ರಲ್ಲಿ ಒಟ್ಟು ರಾಷ್ಟ್ರೀಯ ಆದಾಯ 139.32 ಲಕ್ಷ ಕೋಟಿ ರೂ.ನಷ್ಟಿದೆ ಎಂದು ಸದ್ಯ ಅಂದಾಜಿಲಾಗಿದ್ದು, 2018-19ರಲ್ಲಿ ಇದು 130.34 ಲಕ್ಷ ಕೋಟಿ ರೂ.ನಷ್ಟಿತ್ತು. 

ಬೆಳವಣಿಗೆ ದರಗಳನ್ನು ಆಧರಿಸಿದರೆ, ಒಟ್ಟು ರಾಷ್ಟ್ರೀಯ ಆದಾಯ 2018-19ರಲ್ಲಿ ಶೇ.6.9ರಷ್ಟು ವೃದ್ಧಿಸಿದೆ. 2017-18ರಲ್ಲಿ ಬೆಳವಣಿಗೆ ದರ ಶೇ.7.2ರಷ್ಟಿತ್ತು ಎಂದು ಸಚಿವಾಲಯ ತಿಳಿಸಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp