ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ! 

ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿದಿದ್ದು, 95,380 ಕೋಟಿಯಷ್ಟಾಗಿದೆ. 
ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ!
ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ!

ನವದೆಹಲಿ: ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿದಿದ್ದು, 95,380 ಕೋಟಿಯಷ್ಟಾಗಿದೆ. 

ಕಳೆದ ವರ್ಷದ ಅಕ್ಟೋಬರ್ ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕಡಿಮೆ ಯಾಗಿದೆ. 
 
ಸಿಜಿಎಸ್ ಟಿ-17,582 ಕೋಟಿ ರೂಪಾಯಿ ಸಂಗ್ರಹ, ಎಸ್ ಜಿಎಸ್ ಟಿ-23, 674 ಕೋಟಿ, ಐಜಿಎಸ್ ಟಿ-46,517 ಕೋಟಿ ( ಆಮದಿನಿಂದ ಸಂಗ್ರಹವಾದ 21,446 ಕೋಟಿಯೂ ಸೇರಿ) ಸೆಸ್ 7,607 ಕೋಟಿ (ಆಮದಿನಿಂದ ಸಂಗ್ರಹವಾದ 774 ಕೋಟಿಯೂ ಸೇರಿ) ಸಂಗ್ರಹವಾಗಿದೆ. 

ಸೆಪ್ಟೆಂಬರ್ ನಿಂದ ಅಕ್ಟೋಬರ್ 31 ವರೆಗೆ 73.83 ಲಕ್ಷ ಜಿಎಸ್ ಟಿಆರ್ 3ಬಿ ರಿಟರ್ನ್ಸ್ ದಾಖಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಹಬ್ಬಗಳ ಸಾಲು ಇದ್ದರೂ ಜಿಎಸ್ ಟಿ ಸಂಗ್ರಹ ಕುಸಿತ ಕಂಡಿದೆ. 

ಜಿಎಸ್ ಟಿ ಸಂಗ್ರಹ ಕುಸಿತ ಕಂಡಿರುವುದು ಸರ್ಕಾರಕ್ಕೆ ಸಂಕಷ್ಟದ ಸ್ಥಿತಿಯಾಗಿದೆ. ತೆರಿಗೆ ಸಂಗ್ರಹ ಸುಧಾರಣೆಗಾಗಿ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಧ್ರುವ ಅಡ್ವೈಸರ್ಸ್ ನ ಪಾಲುದಾರರಾಗಿರುವ ಅಮಿತ್ ಭಗತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com