ಸಹೋದ್ಯೋಗಿಯೊಂದಿಗೆ ಸಂಬಂಧ: ಮೆಕ್‌ಡೊನಾಲ್ಡ್ಸ್ ಸಿಇಒ ಈಸ್ಟರ್‌ಬ್ರೂಕ್‌ಗೆ ಕಂಪನಿಯಿಂದ ಗೇಟ್‌ಪಾಸ್‌

ಫಾಸ್ಟ್-ಫುಡ್ ದೈತ್ಯ ಮೆಕ್‌ಡೋನಾಲ್ಡ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್‌ ಬ್ರೂಕ್  ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ' ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಹೊರಹಾಕಲಾಗಿದೆ ಎಂದು ಸಂಸ್ಥೆ  ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್ : ಫಾಸ್ಟ್-ಫುಡ್ ದೈತ್ಯ ಮೆಕ್‌ಡೋನಾಲ್ಡ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್‌ ಬ್ರೂಕ್  ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ' ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಹೊರಹಾಕಲಾಗಿದೆ ಎಂದು ಸಂಸ್ಥೆ  ತಿಳಿಸಿದೆ.

ಮೆಕ್‌ಡೊನಾಲ್ಡ್ಸ್‌ ಯುಎಸ್ಎ ಸಂಸ್ಥೆಯ ಅಧ್ಯಕ್ಷ ಕ್ರಿಸ್ ಕೆಂಪ್ಕಿನ್ಸ್ಕಿ ಅವರನ್ನು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಮಾತ್ರವಲ್ಲ ಕ್ರಿಸ್‌ ಅವರನ್ನು ನಿರ್ದೇಶಕರ ಮಂಡಳಿಗೂ ಆಯ್ಕೆ ಮಾಡಲಾಗಿದೆ.

ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಮತ್ತು ಉದ್ಯೋಗಿಯೊಂದಿಗಿನ ಒಮ್ಮತದ ಸಂಬಂಧವನ್ನು ಹೊಂದಿದ ಹಿನ್ನೆಲೆಯಲ್ಲಿ ಕಂಪನಿಯ ಮಂಡಳಿಯು ಅವರನ್ನು ವಜಾಗೊಳಿಸುವ ನಿರ್ಣಯ ಅಂಗೀಕರಿಸಿತು.

 ಸ್ಟೀವ್ ಈಸ್ಟರ್‌ಬ್ರೂಕ್ ಅವರ ಸ್ಥಾನಕ್ಕೆ ಕೆಂಪ್‌ಕಿನ್ಸ್ಕಿ ಅವರನ್ನು ನೇಮಿಸಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com