ಯುಕೆ ಕೋರ್ಟ್ ನಲ್ಲಿ ನೀರವ್ ಮೋದಿಗೆ ಮತ್ತೆ ಹಿನ್ನಡೆ, ಹೊಸ ಜಾಮೀನು ಅರ್ಜಿ ತಿರಸ್ಕೃತ

ಪಿಎನ್ಬಿ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಯುನೈಟೆಡ್ ಕಿಂಗ್‌ಡಮ್ ನ್ಯಾಯಾಲಯವು ಭಾರತದಿಂದ ಪಲಾಯನವಾಗಿದ್ದ....
ನೀರವ್ ಮೋದಿ
ನೀರವ್ ಮೋದಿ

ಲಂಡನ್: ಪಿಎನ್ಬಿ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಯುನೈಟೆಡ್ ಕಿಂಗ್‌ಡಮ್ ನ್ಯಾಯಾಲಯವು ಭಾರತದಿಂದ ಪಲಾಯನವಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಹೊಸ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು2 ಬಿಲಿಯನ್ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ನೀರವ್ ಮೋದಿ ಸಧ್ಯ ಯುಕೆ ಜೈಲಿನಲ್ಲಿದ್ದು ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆದಿದೆ.

 48 ವರ್ಷದ ನೀರವ್ ಮೋದಿ ಇಂದು ಲಂಡನ್‌ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದು ಮುಂದಿನ ವರ್ಷ  ಮೇ ತಿಂಗಳಚಾರಣೆಯ ತನಕ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆವೇಳೆ ಜಾಮೀನಿಗಾಗಿ 2 ಮಿಲಿಯನ್ ಪೌಂಡ್‌ಗಳಿಂದ 4 ಮಿಲಿಯನ್ ಪೌಂಡ್‌ ಭದ್ರತಾ ಮೊತ್ತ ನೀಡುವುದಾಗಿ ಹೇಳಿದರೂ ಮೋದಿ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಧೀಶ ಎಮ್ಮಾ ಅರ್ಬುತ್‌ನೋಟ್ ಮೋದಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಈ ವರ್ಷಾರಂಭದಲ್ಲಿ ಅದೇ ನ್ಯಾಯಾಲಯದ ಮುಂದೆ ಹಾಜರಾಗಿದ್ದಕ್ಕಿಂತ ನೀರವ್ ಮೋದಿ ಇಂದು ಹೆಚ್ಚು ಆರೋಗ್ಯಪೂರ್ಣರಾಗಿ ಕಾಣುತ್ತಿದ್ದರು. ಅವರು ತಮ್ಮ ಇತ್ತೀಚಿನ ಅರ್ಜಿಯಲ್ಲಿ ಆತಂಕ ಮತ್ತು ಖಿನ್ನತೆ ಬಗೆಗೆ ಹೇಳಿದ್ದರೆಂದು ವರದಿಯಾಗಿದೆ.ಇದಕ್ಕೆ ಹಿಂದೆ ಸಹ ನ್ಯಾಯಾಲಯವು ನೀರವ್ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಿತ್ತು. 

ಈ ವರ್ಷ ಮಾರ್ಚ್ 19 ರಂದು ಭಾರತ ಸರ್ಕಾರದ ಆರೋಪದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ಯಾರ್ಡ್ವಾರಂಟ್ ಹಿನ್ನೆಲೆಯನ್ನಿಟ್ಟು ನೀರವ್ ಮೋದಿಯವರನ್ನು ಬಂಧಿಸಲಾಗಿತ್ತು. ಅಂದಿನಿಂದ ನೀರವ್ ಮೋದಿ ವಾಂಡ್ಸ್ ವರ್ಥ್ ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com