ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು- ಪ್ರಧಾನಿ ಮೋದಿ

ಹಿಮಾಚಲ  ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published: 07th November 2019 02:53 PM  |   Last Updated: 07th November 2019 02:53 PM   |  A+A-


PMModi1

ಪ್ರಧಾನಿ ಮೋದಿ

Posted By : Nagaraja AB
Source : ANI

ಧರ್ಮಶಾಲಾ: ಹಿಮಾಚಲ  ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹೂಡಿಕೆದಾರರ ಸಮಾವೇಶಗಳು ಕೆಲ ನಗರಗಳಲ್ಲಿ ಮಾತ್ರ ನಡೆಯುತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಎಲ್ಲಾ ರಾಜ್ಯಗಳು ವ್ಯಾಪಾರ ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಿವೆ ಎಂದು ಅವರು ಹೇಳಿದ್ದಾರೆ.

ಹೂಡಿಕೆದಾರರಲ್ಲಿ ಆಕರ್ಷಿಸುವಲ್ಲಿ ರಾಜ್ಯಗಳ ನಡುವೆ ಆರೋಗ್ಯಕರ ಪೈಪೋಟಿ ಇದೆ. ಈ ರೀತಿಯ ಪೈಪೋಟಿ ನಮ್ಮ ಉದ್ಯಮಗಳು ಜಾಗತಿಕ ಮಟ್ಟದಲ್ಲಿ  ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ನೆರವಾಗಲಿದೆ. ಉತ್ತಮ ಯಂತ್ರೋಪಕರಣ ಸ್ನಹಿ ವ್ಯವಸ್ಥೆ ಇಂದಿನ ದಿನಗಳಲ್ಲಿ ಎಲ್ಲ ಹೂಡಿಕೆದಾರಿಗೆ ಆಂತರಿಕ ಭಾಗವಾಗಿದೆ ಎಂದರು.

ಸುಲಭ ವ್ಯಾಪಾರ ಮಾಡುವ ರಾಷ್ಟ್ರಗಳ ರಾಂಕಿಂಗ್ ಪಟ್ಟಿಯಲ್ಲಿ ಭಾರತ ಬೃಹತ್ ಮುನ್ನಡೆ ಸಾಧಿಸಿದೆ. ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಉದ್ಯಮಗಳ ತಂತ್ರಜ್ಞಾನ ಅಭಿವೃದ್ದಿಗೆ ಸಾಧ್ಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp