ಸಿಂಗಲ್ಸ್ ಡೇ ಪ್ರಯುಕ್ತ 24 ಗಂಟೆಗಳ ಶಾಪಿಂಗ್: ದಾಖಲೆ ನಿರ್ಮಿಸಿತು ಆಲಿಬಾಬಾದ ವಹಿವಾಟು!  

ಆಲಿಬಾಬಾ ಸಿಂಗಲ್ಸ್ ಡೇ ಶಾಪಿಂಗ್ ನಲ್ಲಿ ದಾಖಲೆಯ ವಹಿವಾಟು ನಡೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 38.3 ಬಿಲಿಯನ್ ಡಾಲರ್ ನಷ್ಟು ವ್ಯಾಪಾರವಾಗಿದೆ. 

Published: 12th November 2019 08:54 PM  |   Last Updated: 12th November 2019 08:54 PM   |  A+A-


Alibaba's Singles' Day shopping event records $38 billion sales!

ಸಿಂಗಲ್ಸ್ ಡೇ ಪ್ರಯುಕ್ತ 24 ಗಂಟೆಗಳ ಶಾಪಿಂಗ್: ದಾಖಲೆ ನಿರ್ಮಿಸಿತು ಆಲಿಬಾಬಾದ ವಹಿವಾಟು!  

Posted By : Srinivas Rao BV
Source : Online Desk

ಹಾಂಗ್ ಝೌ: ಆಲಿಬಾಬಾ ಸಿಂಗಲ್ಸ್ ಡೇ ಶಾಪಿಂಗ್ ನಲ್ಲಿ ದಾಖಲೆಯ ವಹಿವಾಟು ನಡೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 38.3 ಬಿಲಿಯನ್ ಡಾಲರ್ ನಷ್ಟು ವ್ಯಾಪಾರವಾಗಿದೆ. 

ನ.11 ರಂದು ಸಿಂಗಲ್ಸ್ ಡೇ ಪ್ರಯುಕ್ತ 11ನೇ ಆವೃತ್ತಿಯ ಮೆಗಾ 24 ಗಂಟೆಗಳ ಸಿಂಗಲ್ಸ್ ಡೇ ಶಾಪಿಂಗ್ ಕಾರ್ಯಕ್ರಮವನ್ನು ಆಲಿಬಾಬ ಆಯೋಜಿಸಿತ್ತು. 

2018 ರಲ್ಲಿ ಒಂದು ದಿನದ ಶಾಪಿಂಗ್ ಈವೆಂಟ್ ನಲ್ಲಿ ಆಲಿಬಾಬ 30.8 ಬಿಲಿಯನ್ ಡಾಲರ್ ಮೊತ್ತದ ಸರಕುಗಳನ್ನು ಮಾರಾಟ ಮಾಡಿತ್ತು. 

ಆಲಿಬಾಬಾದ ವಿವಿಧ ವಿಭಾಗಗಳಲ್ಲಿ ಅರ್ಧಗಂಟೆಗಳಲ್ಲೇ 10 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆದಿದ್ದು ವಿಶೇಷವಾಗಿತ್ತು. ಈ ಬಾರಿಯ ಶಾಪಿಂಗ್ ಇವೆಂಟ್ ನಲ್ಲಿ 200,000 ಬ್ರಾಂಡ್ ಗಳು ಭಾಗವಹಿಸಿದ್ದವು.  

ಸೈಬರ್ ಮಂಡೆ, ಬ್ಲ್ಯಾಕ್ ಫ್ರೈಡೆಯಂತಹ ಕಾರ್ಯಕ್ರಮಗಳಲ್ಲಿಯೂ ಈ ರೀತಿ 24 ಗಂಟೆಗಳ ಸೇಲ್ಸ್ ನಡೆದು ಮಿಲಿಯನ್ ಗಟ್ಟಲೆ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp