ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.4.2ಕ್ಕೆ ಕುಸಿತ-ಎಸ್‌ಬಿಐ 

ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಟ ಶೇ. 5ರಷ್ಟು ಜಿಡಿಪಿ ದಾಖಲಾಗಿರುವ ಬೆನ್ನಲ್ಲೇ  ಜುಲೈ-ಸೆಪ್ಟೆಂಬರ್ 2019 ರ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.4.2ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಟ ಶೇ. 5ರಷ್ಟು ಜಿಡಿಪಿ ದಾಖಲಾಗಿರುವ ಬೆನ್ನಲ್ಲೇ  ಜುಲೈ-ಸೆಪ್ಟೆಂಬರ್ 2019 ರ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.4.2ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಎಸ್‌ಬಿಐ ರಿಸರ್ಚ್‌ನ ಅರ್ಥಶಾಸ್ತ್ರಜ್ಞರು  ಈ ಬಗೆಗೆ ಎಚ್ಚರಿಕೆ ನೀಡಿದ್ದು ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಈ ಮುನ್ನ ಯೋಜಿಸಿರುವಂತೆ ಶೇ.6.1ರ ಬೆಳವಣಿಗೆಗೆ ಬದಲಾಗಿ ಶೇ. 5ರ ಬೆಳವಣಿಗೆ ದಾಖಲಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ.

ಮಂಗಳವಾರ ಬಿಡುಗಡೆಯಾದ ಎಸ್‌ಬಿಐ ಇಕೋವ್ರಾಪ್ ವರದಿಯು ವಾಹನ ಮಾರಾಟದಲ್ಲಿನ ಮಂದಗತಿ, ಕಡಿಮೆಯಾದ ಗ್ರಾಹಕರ ಬೇಡಿಕೆ, ವೈಮಾನಿಕ ಸಂಚಾರ ಕ್ಷೇತ್ರದಲ್ಲಿನ ಬೇಡಿಕೆ ಕುಸಿತ, ನಿರ್ಮಾಣ ಯೋಜನೆಗಳು ಸೇರಿದಂತೆ ಪ್ರಮುಖ ವಲಯಗಳಲ್ಲಿನ ವಹಿವಾಟು ಕುಂಠಿತವಾಗಿರುವುದು ಇಂತಹಾ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ವಿವರಿಸಿದೆ. ದೇಶದ ಆರ್ಥಿಕ ಬೆಳವಣಿಗೆ ಅಳೆಯಲು ಒಟ್ಟಾರೆ 3 ಮಾನದಂಡಗಳನ್ನು(ಸೂಚಿ) ಗಳನ್ನು ಪರಿಗಣಿಸಿರುವ ಎಸ್‌ಬಿಐ ವೇಗವರ್ಧನೆ ದರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ. 27ಕ್ಕೆ ಕ್ಕೆ ಇಳಿಕೆಯಾಗಿದೆ ಎಂದಿದೆ.ಸೆಫ್ಟೆಂಬರ್ ನಲ್ಲಿ ಇದು ಶೇ.1ಕ್ಕೆ ಇಳಿದಿದೆ.ಅದು 2018 ರ ಅಕ್ಟೋಬರ್‌ನಲ್ಲಿ 85% ರಷ್ಟಿತ್ತು. 

ಎಸ್‌ಬಿಐನ ಹೋಮ್ ಅರ್ಥಶಾಸ್ತ್ರಜ್ಞರು ಹೇಳುವಂತೆ ಮುಂದಿನ ಹಣಕಾಸು ವರ್ಷ ( ಎಫ್‌ವೈ 21) ದಿಂದ ಅವರುಗಳು ಶೇ.6.2ರ ಬೆಳವಣಿಗೆಯನ್ನು ನಿರೀಕ್ಷಿಸುತ್ತಾರೆ.ಆದಾಗ್ಯೂ, ಫೆಬ್ರವರಿ 2020 ರಲ್ಲಿ ನಡೆಯುವ ಜಿಡಿಪಿ ದತ್ತಾಂಶದ ವಾಡಿಕೆಯ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಇದನ್ನು ನೋಡಬೇಕಾಗಿದೆ. ಮುಂದುವರಿದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್‌ಬಿಐ ಡಿಸೆಂಬರ್ ಹಣಕಾಸು ನೀತಿ ಪರಿಶೀಲನೆಯಲ್ಲಿ "ದೊಡ್ಡ ದರ ಕಡಿತ" ಕ್ಕೆ ಮುಂದಾಗಬಹುದು  ಎಂದು ಅವರು ಅಂದಾಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com