ಮೆಡಿಕಬಜಾರ್ ಸಂಸ್ಥೆಯಿಂದ 112 ಕೋಟಿ ರೂ. ಬಂಡವಾಳ ಹೂಡಿಕೆ

ವೈದ್ಯಕೀಯ ಪೂರೈಕೆಗೆ ಭಾರತದ ಅತಿ ದೊಡ್ಡ ಬಿ2ಬಿ  ಆನ್‌ಲೈನ್‌ ವೇದಿಕೆಯಾದ ಮೆಡಿಕಬಜಾರ್ ಸಂಸ್ಥೆಯು ಸೀರಿಸ್ ಬಿ ಫಂಡಿಂಗ್ ನಲ್ಲಿ 112 ಕೋಟಿ ರೂ ಬಂಡವಾಳ ಕ್ರೋಡಿಕರಿಸಿದೆ. 
ಮೆಡಿಕಬಜಾರ್ ಸಂಸ್ಥೆಯಿಂದ 112 ಕೋಟಿ ರೂ. ಬಂಡವಾಳ ಹೂಡಿಕೆ
ಮೆಡಿಕಬಜಾರ್ ಸಂಸ್ಥೆಯಿಂದ 112 ಕೋಟಿ ರೂ. ಬಂಡವಾಳ ಹೂಡಿಕೆ

ಬೆಂಗಳೂರು: ವೈದ್ಯಕೀಯ ಪೂರೈಕೆಗೆ ಭಾರತದ ಅತಿ ದೊಡ್ಡ ಬಿ2ಬಿ  ಆನ್‌ಲೈನ್‌ ವೇದಿಕೆಯಾದ ಮೆಡಿಕಬಜಾರ್ ಸಂಸ್ಥೆಯು ಸೀರಿಸ್ ಬಿ ಫಂಡಿಂಗ್ ನಲ್ಲಿ 112 ಕೋಟಿ ರೂ ಬಂಡವಾಳ ಕ್ರೋಡಿಕರಿಸಿದೆ. 

ಹೇಲ್ತ್ ಕೇರ್-ಕೇಂದ್ರಿಕೃತ ವಿಸಿ ಫರ್ಮ್, ಹೆಲ್ತ್ ಕ್ವಾಡ್, ಅಖರ್ಮನ್ಸ್ ಅಂಡ್ ವ್ಯಾನ್ ಹಾರೇನ್ ಸಂಸ್ಥೆಗಳ ಮುಂದಾಳತ್ವದಲ್ಲಿ ಈ ಬಂಡವಾಳ ಕ್ರೋಡಿಕರಣ ಪ್ರಕ್ರಿಯೆ ನೆರವೇರಿತು.

100 ದಶಲಕ್ಷ ಯುಎಸ್ ಡಾಲರ್ ಆದಾಯ ಮತ್ತು 5ಎಕ್ಸ್ ಪ್ರಗತಿಯನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಸಾಧಿಸಲು ನಿರ್ಧರಿಸಿರುವ ಮೆಡಿಕಬಜಾರ್, ಈ ಬಂಡವಾಳವನ್ನು ವ್ಯಾಪಾರ ವಿಸ್ತರಣೆಗೆ ಮತ್ತು ಉತ್ಪನ್ನಗಳ ಗುಣಮಟ್ಟ ಹೆಚ್ಚಳಕ್ಕೆ ಬಳಸಿಕೊಳ್ಳಲಾಗುತ್ತದೆ. ತಂತ್ರಜ್ಞಾನ ಮತ್ತು ಪೂರೈಕೆ ವ್ಯವಸ್ಥೆಯ ಮೂಲಸೌಕರ್ಯದ ಅಭಿವೃದ್ಧಿಗೆ ಕೂಡ ಈ ಬಂಡವಾಳದ ಬಳಕೆ ಮಾಡಲಾಗುವುದು. 

ಗ್ರಾಮೀಣ ಪ್ರದೇಶ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲಿ ಪೂರೈಕೆ ವ್ಯವಸ್ಥೆಯನ್ನು ಬಳಪಡಿಸಲು ಕೂಡ ಈ ಬಂಡವಾಳ ಸಹಕಾರಿಯಾಗಲಿದೆ. ಜನತೆಗೆ ಗುಣಮಟ್ಟದ ಹೇಲ್ತ್ ಕೇರ್ ಪೂರೈಸುವುದರ ಜೊತೆಗೆ ಇದರ ಪೂರೈಕೆ  ವ್ಯವಸ್ಥೆಯಲ್ಲೂ ಕೂಡ ನಮ್ಮ ಪಾತ್ರವನ್ನು ನಿರ್ವಹಿಸಬೇಕು. 2025 ರ ಹೊತ್ತಿಗೆ ಶೇಕಡ 10 ರಷ್ಟು ಮಾರುಕಟ್ಟೆ ಶೇರ್ ಅನ್ನು ಸಾಧಿಸುವ ಗುರಿ ನಮ್ಮದು ಮತ್ತು ಇದರ ಸಾಧನೆಗೆ ನಮ್ಮ ಪರಿಶ್ರಮ ನಿರಂತರವಾಗಿರುತ್ತದೆ” ಎಂದು ಮೆಡಿಕಬಜಾರ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ವಿವೇಕ್ ತಿವಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com