ಷೇರುಪೇಟೆ ದಾಖಲೆ ಏರಿಕೆ, ಶುಲ್ಕ ಹೆಚ್ಚಳ ಪ್ರಸ್ತಾಪದಿಂದ  ಆರ್‌ಐಎಲ್ ಗೆ ಶೇ 4 ರಷ್ಟು ಲಾಭ. 

ಬುಧವಾರ ಮುಂಬೈ ಷೇರು ಮಾರುಕಟ್ಟೆ ಬಿಎಸ್‌ಇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಒಟ್ಟು 300 ಪಾಯಿಂಟ್‌ಗಳ ಹೆಚ್ಚಳ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಲಾಭದಿಂದ ಉತ್ತೇಜಿತವಾಗಿ ಪೇಟೆ ಈ ಹೊಸ ಎತ್ತರಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಬುಧವಾರ ಮುಂಬೈ ಷೇರು ಮಾರುಕಟ್ಟೆ ಬಿಎಸ್‌ಇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಒಟ್ಟು 300 ಪಾಯಿಂಟ್‌ಗಳ ಹೆಚ್ಚಳ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಲಾಭದಿಂದ ಉತ್ತೇಜಿತವಾಗಿ ಪೇಟೆ ಈ ಹೊಸ ಎತ್ತರಕ್ಕೇರಿದೆ.

40,816.38 ರ ಗರಿಷ್ಠ ಮಟ್ಟವನ್ನು ತಲುಪಿದ ನಂತರ, 30-ಷೇರುಗಳ ಸೂಚ್ಯಂಕವು 321.20 ಪಾಯಿಂಟ್ ಅಥವಾ 0.79 ಶೇಕಡಾ ವಹಿವಾಟು ನಡೆಸಿದೆ. ಅಂತೆಯೇನಿಫ್ಟಿ 12,000 ಅಂಕಗಳನ್ನು ಗಳಿಸಿ 87.25 ಪಾಯಿಂಟ್ ಅಥವಾ 0.73 ಶೇಕಡಾ ಏರಿಕೆಯೊಡನೆ , 12,027.35 ಕ್ಕೆ ತಲುಪಿದೆ.

ರಿಲಯನ್ಸ್ ಕಂಪನಿಯ ಟೆಲಿಕಾಂ ವಿಭಾಗವಾದ ರಿಲಯನ್ಸ್ ಜಿಯೋ ಶುಲ್ಕ ಏರಿಕೆ ಪ್ರಸ್ತಾಪ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಷೇರುಗಳು ದಾಖಲೆಯ ಗರಿಷ್ಠ 1,571.85 ರೂ.ಗಳನ್ನು  ಮುಟ್ಟಿತು. ಇದರೊಡನೆ ಲು ಸುಮಾರು 10 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ-ಬಂಡವಾಳೀಕರಣದ ಮಟ್ಟ (ಮಾರ್ಕೆಟಿಂಗ್ ಕ್ಯಾಪಿಟಲ್) ತಲುಪಿರಿವ ಕ್ಂಪನಿ  ಮುಂದಿನ ಕೆಲವು ವಾರಗಳಲ್ಲಿ ನಿಯಮಗಳಿಗೆ ಅನುಸಾರವಾಗಿ ಶುಲ್ಕ ಹೆಚ್ಚಳ ಮಾಡುವುದಾಗಿ ಮಂಗಳವಾರ ಘೋಷಿಸಿದೆ.

ಇಂಡೆಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಭಾರತಿ ಏರ್‌ಟೆಲ್, ಎಲ್ ಅಂಡ್ ಟಿ, ಏಷ್ಯನ್ ಪೇಂಟ್ಸ್, ಯೆಸ್ ಬ್ಯಾಂಕ್ ಮತ್ತು ಮಾರುತಿ  ಸಂಸ್ಥೆಗಳು ಷೇರುಪೇಟೆಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಇತರೆ ಕಂಪನಿಗಳಾಗಿದೆ.

ಏತನ್ಮಧ್ಯೆ, ಬಜಾಜ್ ಆಟೋ, ಕೊಟಕ್ ಬ್ಯಾಂಕ್, ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ಎಸ್‌ಬಿಐ ಮತ್ತು ಹೀರೋ ಮೊಟೊಕಾರ್ಪ್ ಷೇರುಗಳಲ್ಲಿ ಇಳಿಕೆ ಕಂಡುಬಂದಿತು.

ಡಾಲರ್ ಎದುರು ರೂಪಾಯಿ ಮೌಲ್ಯವು 71.69 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.31 ರಷ್ಟು ಕುಸಿದು 60.72 ಡಾಲರ್‌ಗೆ ತಲುಪಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com