ಅತಿದೊಡ್ಡ ಖಾಸಗೀಕರಣ: ಬಿಪಿಸಿಎಲ್, ಎಸ್ ಸಿಐ,ಕಾನ್ಕೋರ್ ನಲ್ಲಿನ ಷೇರು ಮಾರಾಟಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್ ) ಮತ್ತು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ ಸಿಐ)  ಹಾಗೂ  ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ತಾನು ಹೊಂದಿರುವ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು   ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್ ) ಮತ್ತು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ ಸಿಐ)  ಹಾಗೂ  ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ತಾನು ಹೊಂದಿರುವ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು   ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಷೇರು ಮಾರಾಟದ ಮೂಲಕ ಸರ್ಕಾರಿ ಸ್ವಾಮ್ಯದ ಈ ಎರಡು ಕಂಪನಿಗಳಿಂದ ನಿರ್ಗಮಿಸಲು ಸರ್ಕಾರ ಸಿದ್ಧತೆ ನಡೆಸಿದೆ.  ಸ್ಪೇಕ್ಟ್ರಮ್ ಪಾವತಿಗಾಗಿ ಎರಡು ವರ್ಷಗಳ ನಿಷೇಧವನ್ನು ಕ್ಯಾಬಿನೆಟ್ ಅಂಗೀಕರಿಸಿದೆ. 

ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳ ಷೇರುಗಳ ಮಾರಾಟವೂ ಎನ್ ಡಿಎ ಸರ್ಕಾರದ ಮಹತ್ವದ ಕಾರ್ಯತಂತ್ರವಾಗಿದೆ.  ನುಮಲಿಗಡ್ ರೆಫಿನರಿ ತನ್ನ ಬಂಡವಾಳವನ್ನು ಹಿಂತೆಗೆದುಕೊಂಡ ಬಳಿಕ ಸರ್ಕಾರ ಬಿಪಿಸಿಲ್ ನಲ್ಲಿನ  ಒಟ್ಟು ಶೇ. 53. 29 ರಷ್ಟು ಹೊಂದಿರುವ ತನ್ನ ಎಲ್ಲಾ ಷೇರುಗಳನ್ನು ಮಾರಾಟ ಮಾಡಲಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ತೆಹ್ರಿ ಜಲ ಅಭಿವೃದ್ಧಿ ನಿಗಮ, ನಾರ್ತ್ ಈಸ್ಟನ್ ಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮೆಟೆಡ್ ನಿಂದ ರಾಜ್ಯ ನಡೆಸುವ ಎನ್ ಟಿಪಿಸಿ ಲಿಮಿಟೆಡ್ ನಿಂದಲೂ ಸರ್ಕಾರ ತನ್ನ ಷೇರುಗಳನ್ನು ಮಾರಾಟ ಮಾಡಲಿದೆ ಎಂದು ಅವರು ಹೇಳಿದ್ದಾರೆ. 

ನಿರ್ವಹಣಾ ನಿಯಂತ್ರಣವನ್ನು ಉಳಿಸಿಕೊಂಡು ಆಯ್ದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ ಸರ್ಕಾರದ ಪಾಲನ್ನು ಶೇಕಡಾ 51ಕ್ಕಿಂತಲೂ ಕಡಿಮೆ ಮಾಡಿಕೊಳ್ಳಲು ಕ್ಯಾಬಿನೆಟ್ ಅನುಮೋದಿಸಿದೆ. ಪ್ರಸ್ತುತ ಬಿಪಿಸಿಎಲ್ ನಲ್ಲಿ ಶೇ. 53. 29 ಹಾಗೂ ಎಸ್ ಸಿಐನಲ್ಲಿ ಶೇ. 63. 75 ರಷ್ಟು ಷೇರುಗಳನ್ನು ಸರ್ಕಾರ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com