ಜಿಡಿಪಿ ಮತ್ತೆ ಕುಸಿತ!: 6 ವರ್ಷಗಳಲ್ಲೇ ಕ್ಷೀಣ! 

ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.5 ರಿಂದ ಶೇ.4.5ಕ್ಕೆ ಕುಸಿದಿದೆ. 

Published: 29th November 2019 06:37 PM  |   Last Updated: 29th November 2019 06:39 PM   |  A+A-


GDP growth slumps to six-year low of 4.5 per cent in second quarter

ಜಿಡಿಪಿಯಲ್ಲಿ ಮತ್ತೆ ಭಾರಿ ಕುಸಿತ!: 6 ವರ್ಷಗಳಲ್ಲೇ ಕ್ಷೀಣ!

Posted By : Srinivas Rao BV
Source : The New Indian Express

ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.5 ರಿಂದ ಶೇ.4.5ಕ್ಕೆ ಕುಸಿದಿದೆ. 

ನ.29 ರಂದು ಬಿಡುಗಡೆಯಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ ಕಂಡಿದೆ. 2012-13 ನೇ ಸಾಲಿನ ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.4.3 ರಷ್ಟಕ್ಕೆ ಕುಸಿದಿತ್ತು. ಈ ಬಳಿಕ ಇದೇ ಮೊದಲ ಬಾರಿಗೆ 4.5 ಕ್ಕೆ ಕುಸಿದಿದೆ. 

2018-19 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7 ರಷ್ಟಿತ್ತು. ಕಳೆದ ವರ್ಷ ಆರು ತಿಂಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ.7.5 ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ ಈ ಬಾರಿ ಆರು ತಿಂಗಳ ಅವಧಿಯಲ್ಲಿ ಶೇ.4.8 ರಷ್ಟೇ ಬೆಳವಣಿಗೆ ಸಾಧ್ಯವಾಗಿದೆ. 

2019-20 ರ ಅವಧಿಯ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್ ಬಿಐ ಶೇ.6.9 ರಿಂದ ಶೇ.6.1 ಕ್ಕೆ ಇಳಿಸಿತ್ತು. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ.6 ರಷ್ಟಿತ್ತು. ಇದೂ ಸಹ ಅಲ್ಲಿನ ಆರ್ಥಿಕತೆಗೆ ಸಂಬಂಧಿಸಿದಂತೆ 27 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯದ್ದಾಗಿತ್ತು.
 

Stay up to date on all the latest ವಾಣಿಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp