ಹೃತಿಕ್ ರೋಷನ್ ಪ್ರಚಾರದ 'ಜಾಲಿ ತುಳಸಿ 51' ಉತ್ಪನ್ನ ಜನರ ಹಾದಿ ತಪ್ಪಿಸುತ್ತಿದೆ: ಜಾಹೀರಾತು ಮಾನದಂಡ ಮಂಡಳಿ

'ಜಾಲಿ ತುಳಸಿ 51' ಎಂಬ ಆರೋಗ್ಯ ಉತ್ಪನ್ನವನ್ನು ಅದರ ನಿಖರ ವೈಜ್ಞಾನಿಕ ಗುಣಮಟ್ಟವನ್ನು ದೃಢಪಡಿಸಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಲಾಗಿದ್ದು ಇದರಿಂದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಸಂಕಷ್ಟ ಎದುರಾಗಿದೆ.
ಹೃತಿಕ್ ರೋಷನ್
ಹೃತಿಕ್ ರೋಷನ್

ಮುಂಬೈ: 'ಜಾಲಿ ತುಳಸಿ 51' ಎಂಬ ಆರೋಗ್ಯ ಉತ್ಪನ್ನವನ್ನು ಅದರ ನಿಖರ ವೈಜ್ಞಾನಿಕ ಗುಣಮಟ್ಟವನ್ನು ದೃಢಪಡಿಸಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಲಾಗಿದ್ದು ಇದರಿಂದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಸಂಕಷ್ಟ ಎದುರಾಗಿದೆ.


ಈ ಉತ್ಪನ್ನದ ಪ್ರಚಾರ ರಾಯಭಾರಿಯಾಗಿ ಸಹಿ ಮಾಡುವ ಮುನ್ನ ಹೃತಿಕ್ ರೋಷನ್ ಅವರು ಜಾಹೀರಾತಿನಲ್ಲಿ ಹೇಳುವ ವಿಷಯಗಳು, ವಿವರಗಳು ಮತ್ತು ಹೋಲಿಕೆಗಳನ್ನು ದೃಢಪಡಿಸಿ, ಉತ್ಪನ್ನದ ಕಾರ್ಯತತ್ಪರತೆಯನ್ನು ನಿಶ್ಚಯಿಸಿದ ನಂತರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅನಿಸುತ್ತಿಲ್ಲ, ಇದು ಜನರನ್ನು ತಪ್ಪು ದಾರಿಗೆಳಯುವ ಸಾಧ್ಯತೆಯಿದೆ ಎಂದು ಜಾಹೀರಾತು ಮಾನದಂಡ ಮಂಡಳಿ(ಎಎಸ್ ಸಿಐ) ಹೇಳಿಕೆಯಲ್ಲಿ ತಿಳಿಸಿದೆ.


ಎಎಸ್ ಸಿಐ ಒಂದು ಸ್ವಯಂ ನಿಯಂತ್ರಣ ಸಂಸ್ಥೆಯಾಗಿದ್ದು, ಜಾಲಿ ತುಳಸಿ 51ನಲ್ಲಿ ಹೇಳಿರುವಂತೆ ಉತ್ಪನ್ನ ರೋಗನಿರೋಧಕ ಶಕ್ತಿ ಮತ್ತು ರೋಗಗಳಿಂದ ರಕ್ಷಣೆ ಹೆಚ್ಚು ಮಾಡುತ್ತದೆ ಎಂಬ ಪ್ರತಿಪಾದನೆಯನ್ನು ವೈಜ್ಞಾನಿಕವಾಗಿ ವೈದ್ಯರುಗಳಿಂದ ದೃಢಪಡಿಸಿಕೊಂಡಿಲ್ಲ ಹಾಗಾಗಿ ಇದು ಜನರನ್ನು ತಪ್ಪುದಾರಿಗೆಳಯುವ ಸಾಧ್ಯತೆಯಿದೆ ಎಂದು ಹೇಳಿದೆ.


ಐದು ಬಗೆಯ ತುಳಸಿ ಎಣ್ಣೆಯಿಂದ ತೆಗೆಯಲ್ಪಟ್ಟ ಆಯುರ್ವೇದಿಕ್ ಉತ್ಪನ್ನವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೆ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳುತ್ತದೆ. ಆದರೆ ಈ ಉತ್ಪನ್ನದ ವಿವರಣೆಯನ್ನು ಕಂಪೆನಿ ಕೊಟ್ಟಿಲ್ಲ ಎಂದು ಜಾಹೀರಾತು ಗುಣಮಟ್ಟ ಸಂಸ್ಥೆ ಹೇಳಿದೆ.


ದಾರಿತಪ್ಪಿಸುವ ಜಾಹೀರಾತಿನ ಪರಿಣಾಮಗಳು ಸಾರ್ವಜನಿಕರಿಗೆ ಮಾತ್ರವಲ್ಲದೆ ಜಾಹೀರಾತುದಾರರ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅವರ ಖ್ಯಾತಿಯನ್ನು ಹಾಳು ಮಾಡುವುದಲ್ಲದೆ ಉತ್ಪನ್ನಗಳ ಮೇಲೆ ಗ್ರಾಹಕರ ನಂಬಿಕೆ ಕಡಿಮೆಯಾಗುತ್ತದೆ ಎಂದು ಎಎಸ್ ಸಿಐ ಅಧ್ಯಕ್ಷ ರೋಹಿತ್ ಗುಪ್ತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com