ಜಿಡಿಪಿ ವರದಿಗೂ ಮುನ್ನವೇ ಡಾಲರ್ ಎದುರು ಕುಸಿತ ಕಂಡ ಭಾರತೀಯ ರೂಪಾಯಿ

ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ಭಾರತೀಯ ರೂಪಾಯಿ ಮೌಲ್ಯದಲ್ಲಿ 11 ಪೈಸೆಯಷ್ಟು ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ಭಾರತೀಯ ರೂಪಾಯಿ ಮೌಲ್ಯದಲ್ಲಿ 11 ಪೈಸೆಯಷ್ಟು ಕುಸಿತ ಕಂಡಿದೆ.

ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 11 ಪೈಸೆ ಕುಸಿತ ಕಂಡು, 71.73 ರೂಪಾಯಿ ತಲುಪಿತ್ತು. ಇಂಟರ್ ಬ್ಯಾಂಕ್ ಫಾರಿನ್​ ಎಕ್ಸ್​ಚೇಂಜ್​ನಲ್ಲಿ ಬೆಳಗ್ಗೆ ಅಮೆರಿಕನ್ ಡಾಲರ್​ ಎದುರು ರೂಪಾಯಿ ಮೌಲ್ಯ 71.63 ರೊಂದಿಗೆ ವಹಿವಾಟು ಆರಂಭವಾಗಿತ್ತು. ಗುರುವಾರ ಸಂಜೆ ವಹಿವಾಟು ಮುಕ್ತಾಯವಾದಾಗ ರೂಪಾಯಿ ಮೌಲ್ಯ 71.62 ರೂಪಾಯಿ ಆಗಿತ್ತು.

ಆದರೆ ಶುಕ್ರವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವಂತೆ ಹೂಡಿಕೆದಾರರು ಅಮೆರಿಕ-ಚೀನಾ ವಾಣಿಜ್ಯ ವಹಿವಾಟಿನಲ್ಲಿ ಸ್ಪಷ್ಟತೆಯನ್ನು ಹುಡುಕುತ್ತಿದ್ದು, ನಿಧಾನಗತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಭಾರತದ ರೂಪಾಯಿ ವಹಿವಾಟು ಕೂಡ ನಿಧಾನಗತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಚ್ಚಾ ತೈಲ ಮಾರುಕಟ್ಟೆಯಲ್ಲೂ ಬ್ಯಾರೆಲ್ ದರ ಶೇಕಡ 0.41 ಕುಸಿತ ಕಂಡು 63.61 ಡಾಲರ್ ತಲುಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com