ಎಸ್‌ಬಿಐ ಗ್ರಾಹಕರೇ ಗಮನಿಸಿ: ಇಲ್ಲಿದೆ ಪರಿಷ್ಕೃತ ಬ್ಯಾಂಕ್ ಶುಲ್ಕಗಳು!

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಎಟಿಎಂ ವಿತ್ ಡ್ರಾ  ಮಿತಿಯನ್ನು ಪರಿಷ್ಕರಿಸಿದ್ದು,ಇಂದಿನಿಂದ  ಇನ್ನಿತರ ಸೇವಾ ಶುಲ್ಕವನ್ನು ಆರಂಭಿಸಿದೆ. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ, ತಿಳಿಯಬೇಕಾದ ಬದಲಾವಣೆಗಳು ಇಲ್ಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಎಟಿಎಂ ವಿತ್ ಡ್ರಾ  ಮಿತಿಯನ್ನು ಪರಿಷ್ಕರಿಸಿದ್ದು,ಇಂದಿನಿಂದ  ಇನ್ನಿತರ ಸೇವಾ ಶುಲ್ಕವನ್ನು ಆರಂಭಿಸಿದೆ. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ, ತಿಳಿಯಬೇಕಾದ ಬದಲಾವಣೆಗಳು ಇಲ್ಲಿವೆ.

1. ಎಟಿಎಂ ವಿತ್ ಡ್ರಾ ನಿಯಮಗಳು: ಉಳಿತಾಯ ಖಾತೆಯಲ್ಲಿ ಸರಾಸರಿ ಮಾಸಿಕ 25 ಸಾವಿರ ಸಾವಿರ ರೂಪಾಯಿ ಬ್ಯಾಲೆನ್ಸ್ ಹೊಂದಿರುವವರು ಉಚಿತವಾಗಿ  ಐದು ಬಾರಿ ಸ್ಟೇಟ್ ಬ್ಯಾಂಕ್  ಆಪ್ ಇಂಡಿಯಾದ ಎಟಿಎಂಗಳಿಂದ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನಿತರ ಬ್ಯಾಂಕುಗಳ ಎಟಿಎಂಗಳಿಂದ ಎಂಟು ಬಾರಿ ವಿತ್  ಡ್ರಾ ಮಾಡಬಹುದಾಗಿದೆ.

*.  25 ಸಾವಿರಕ್ಕಿಂತಲೂ ಹೆಚ್ಚು 1 ಲಕ್ಷ ರೂಪಾಯಿ ವರೆಗೂ ಹಣ ಹೊಂದಿರುವವರು ಎಸ್ ಬಿಐ ಎಟಿಎಂಗಳಲ್ಲಿ ವಿತ್ ಡ್ರಾ ಮಾಡಲು ಯಾವುದೇ ಮಿತಿ ಇಲ್ಲ. ಇನ್ನಿತರ ಬ್ಯಾಂಕುಗಳ ಎಟಿಎಂಗಳ ಮೂಲಕ ಎಂಟು ಬಾರಿ ವಿತ್ ಡ್ರಾ ಮಾಡಬಹುದು. 

*. ಪ್ರಸ್ತುತ ಖಾತೆಯಲ್ಲಿ 1 ಲಕ್ಷ ರೂ. ಹಣ ಹೊಂದಿರುವವರು ಎಸ್ ಬಿಐ ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ಎಷ್ಟು ಬಾರಿಯಾದರೂ  ವಿತ್ ಡ್ರಾ ಮಾಡಬಹುದು. 

ಒಂದು ವೇಳೆ ಎಸ್ ಬಿಐ ಎಟಿಎಂಗಳಲ್ಲಿ ತಿಂಗಳ ಮಿತಿ ಮೀರಿದರೆ  10 ರೂ. ಶುಲ್ಕದ ಜೊತೆಗೆ ಜಿಎಸ್ ಟಿ ತೆರಿಗೆಯನ್ನು ಹಾಕಲಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳ ಮಿತಿ ಮೀರಿದರೆ 20 ರೂ. ಶುಲ್ಕದ ಜೊತೆಗೆ ಜಿಎಸ್ ಟಿ ಹಾಕಲಾಗುತ್ತದೆ. 

ಒಂದು ವೇಳೆ ಎಸ್ ಬಿಐ ಎಟಿಎಂಗಳಲ್ಲಿ ಬ್ಯಾಲೆನ್ಸ್ ಚೆಕಿಂಗ್, ಪಿನ್  ಬದಲಾವಣೆ ಮತ್ತಿತರ ಹಣಕಾಸುಯೇತರ ವ್ಯವಹಾರಕ್ಕಾಗಿ 5 ರೂ ಶುಲ್ಕದೊಂದಿಗೆ ಜಿಎಸ್ ಟಿ ಹಾಕಲಾಗುತ್ತದೆ. ಇನ್ನಿತರ ಬ್ಯಾಂಕುಗಳ ಎಟಿಎಂಗಳಿಗೆ ರೂ. 8 ಹಾಗೂ ಜಿಎಸ್ ಟಿ ಹಾಕಲಾಗುತ್ತದೆ. 

ಖಾತೆಯಲ್ಲಿ ಹಣ ಇಲ್ಲದೆ ವ್ಯವಹಾರ  ಕುಂಠಿತಗೊಂಡರೆ ರೂ. 20  ಶುಲ್ಕದ ಜೊತೆಗೆ ಜಿಎಸ್ ಟಿಯನ್ನು ಹಾಕಲಾಗುತ್ತದೆ. ಎಸ್ ಬಿಐ ನೊಂದಿಗೆ ಸಂಬಂಳ ಖಾತೆ ( ಸ್ಯಾಲರಿ ಅಕೌಂಟ್ ) ಹೊಂದಿದ್ದರೆ ಎಸ್ ಬಿಐ ಹಾಗೂ ಇನ್ನಿತರ ಎಟಿಎಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು.

2 )ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಶುಲ್ಕ

ಮೆಟ್ರೋ, ನಗರ ಕೇಂದ್ರಿತ , ಪಟ್ಟಣ ಕೇಂದ್ರಿತ ಹಾಗೂ ಗ್ರಾಮೀಣ ಕೇಂದ್ರಿತ ಶಾಖೆಗಳೆಂದು ವಿಭಾಗಿಸಲಾಗಿದ್ದು, ನಿಮ್ಮ ಖಾತೆ ಯಾವ ಶಾಖೆಯಲ್ಲಿದೆಯೋ ಅದರ ಆಧಾರದ ಮೇಲೆ  ಸರಸಾರಿ ಮಾಸಿಕ ಬ್ಯಾಲೆನ್ಸ್  ನಿರ್ವಹಣೆ ಮಾಡದಿದ್ದರೆ ಶುಲ್ಕ ವಿಧಿಸಲಾಗುತ್ತದೆ. 

* ಮೆಟ್ರೋ ಹಾಗೂ ನಗರ ಕೇಂದ್ರಿತ ಬ್ರಾಂಚ್ ಗಳಲ್ಲಿ  ( 3 ಸಾವಿರ ರೂ. ಹಣ ಖಾತೆಯಲ್ಲಿರಬೇಕಾಗುತ್ತದೆ)

 ಶೇ. 50ಕ್ಕೆ ಸಮವಾಗಿದ್ದರೆ ಅಥವಾ ಅದಕ್ಕಿಂತ ಕಡಿಮೆ ಹಣ ಹೊಂದಿದ್ದರೆ  10 ರೂ. ಶುಲ್ಕದೊಂದಿಗೆ ಜಿಎಸ್ ಟಿ ಶೇ 50 ರಿಂದ 75 ರಿದ್ದರೆ 12 ರೂ ಶುಲ್ಕದೊಂದಿಗೆ ಜಿಎಸ್ ಟಿ ಹಾಗೂ ಶೇ. 75ಕ್ಕಿಂತಲೂ ಹೆಚ್ಚಾಗಿದ್ದರೆ 15 ರೂ. ಶುಲ್ಕದೊಂದಿಗೆ ಜಿಎಸ್ ಟಿ  ವಿಧಿಸಲಾಗುತ್ತದೆ. 

* ಪಟ್ಟಣ ಕೇಂದ್ರಿತ ಬ್ರಾಂಚ್ ಗಳಲ್ಲಿ   (  2 ಸಾವಿರ ರೂ. ಹಣ ಖಾತೆಯಲ್ಲಿರಬೇಕಾಗುತ್ತದೆ )

ಶೇ. 50ಕ್ಕೆ ಸಮನಾಗಿದ್ದರೆ ಅಥವಾ ಅದಕ್ಕಿಂತಲೂ ಕಡಿಮೆ ಹಣ ಹೊಂದಿದ್ದರೆ ರೂ. 7. 50 ಜೊತೆಗೆ ಜಿಎಸ್ ಟಿ , ಶೇ. 50ರಿಂದ 75 ಆಗಿದ್ದರೆ 10 ರೂ. ಶುಲ್ಕದೊಂದಿಗೆ ಜಿಎಸ್ ಟಿ ಹಾಗೂ ಶೇ.75ಕ್ಕಿಂತಲೂ ಹೆಚ್ಚಾಗಿದ್ದರೆ 12 ರೂ ಶುಲ್ಕದೊಂದಿಗೆ ಜಿಎಸ್ ಟಿ ವಿಧಿಸಲಾಗುತ್ತದೆ. 

* ಗ್ರಾಮೀಣ ಕೇಂದ್ರಿತ ಬ್ರಾಂಚ್ ಗಳಲ್ಲಿ  (  1 ಸಾವಿರ ರೂ. ಹಣ ಖಾತೆಯಲ್ಲಿರಬೇಕಾಗುತ್ತದೆ)

ಶೇ, 50ಕ್ಕೆ ಸಮವಾಗಿದ್ದರೆ ಅಥವಾ ಅದಕ್ಕಿಂತಲೂ ಕಡಿಮೆ ಹಣವಿದ್ದರೆ 5 ರೂ. ಶುಲ್ಕದೊಂದಿಗೆ ಜಿಎಸ್ ಟಿ ಹಾಗೂ ಶೇ. 50ರಿಂದ 75 ಆಗಿದ್ದರೆ 7.50 ರೂ ಶುಲ್ಕದೊಂದಿಗೆ ಜಿಎಸ್ ಟಿ ಹಾಗೂ ಶೇ.75ಕ್ಕಿಂತಲೂ ಹೆಚ್ಚಾಗಿದ್ದರೆ 10 ರೂ. ಶುಲ್ಕದೊಂದಿಗೆ  ಜಿಎಸ್ ಟಿ ಹಾಕಲಾಗುತ್ತದೆ. 

3) ಆರ್ ಟಿಜಿಎಸ್ ಮತ್ತು ಎನ್ ಇಎಫ್ ಟಿ ಅನ್ ಲೈನ್ ವ್ಯವಹಾರಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆದಾಗ್ಯೂ, ಒಂದು ವೇಳೆ ಶಾಖೆಯವರು ಹಾಕಿದರೆ ಗ್ರಾಹಕರು ಭರಿಸಬೇಕಾಗುತ್ತದೆ. 

ನಿಮ್ಮ ಬ್ರಾಂಚ್ ಗಳಲ್ಲಿ ಆರ್ ಟಿಜಿಎಸ್ ಗೆ ವಿಧಿಸಲಾಗುವ ಶುಲ್ಕ

ರೂ. 2 ಲಕ್ಷ ಹಾಗೂ 5 ಲಕ್ಷ ವ್ಯವಹಾರಕ್ಕಾಗಿ     ರೂ. 20 ಶುಲ್ಕ ಹಾಗೂ ಜಿಎಸ್ ಟಿ ಹಾಕಲಾಗುತ್ತದೆ. 5 ಲಕ್ಷಕ್ಕಿಂತಲೂ ಹೆಚ್ಚು ವ್ಯವಹಾರ ಮಾಡಿದರೆ 40 ರೂ. ಶುಲ್ಕ ಹಾಗೂ ಜಿಎಸ್ ಟಿ ಹಾಕಲಾಗುತ್ತದೆ. 

ನಿಮ್ಮ ಬ್ರಾಂಚ್ ಗಳಲ್ಲಿ ಎನ್ ಇಎಫ್ ಟಿ ಶುಲ್ಕ 

10 ಸಾವಿರ ರೂ. ವರೆಗಿನ ವ್ಯವಹಾರಕ್ಕೆ  ರೂ. 2 ಶುಲ್ಕ ಹಾಗೂ ಜಿಎಸ್ ಟಿ ,  10 ಸಾವಿರ ಹಾಗೂ 1 ಲಕ್ಷ ರೂ. ನಡುವಣ ಹಣ ವ್ಯವಹಾರಕ್ಕಾಗಿ 4 ರೂ. ಶುಲ್ಕ ಹಾಗೂ ಜಿಎಸ್ ಟಿ ವಿಧಿಸಲಾಗುತ್ತದೆ. 1 ಲಕ್ಷ  ಹಾಗೂ 2 ಲಕ್ಷ ರೂ. ಮಧ್ಯ ವ್ಯವಹಾರ ಮಾಡಿದರೆ ರೂ. 12 ಶುಲ್ಕ ಹಾಗೂ ಜಿಎಸ್ ಟಿ ಹಾಗೂ 2 ಲಕ್ಷಕ್ಕಿಂತಲೂ ಹೆಚ್ಚಿನ ವ್ಯವಹಾರಕ್ಕಾಗಿ ರೂ. 20 ಶುಲ್ಕದೊಂದಿಗೆ ಜಿಎಸ್ ಟಿ ವಿಧಿಸಲಾಗುತ್ತದೆ. 

4 )ಹಣ ಜಮೆಗೆ ಶುಲ್ಕ

ಒಂದು ತಿಂಗಳಲ್ಲಿ ಮೂರು ಬಾರಿ ಹಣವನ್ನು ಯಾವುದೇ ಶುಲ್ಕವಿಲ್ಲದೆ ಜಮೆ ಮಾಡಬಹುದಾಗಿದೆ. ಆನಂತರ ಜಮೆ ಮಾಡಿದರೆ ರೂ. 50 ಹಾಗೂ ಜಿಎಸ್ ಟಿ ಹಾಕಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com