ಹೆಚ್ ಎಸ್ ಬಿಸಿ ಬ್ಯಾಂಕಿನಿಂದ ಸದ್ಯದಲ್ಲಿಯೇ 10 ಸಾವಿರ ಸಿಬ್ಬಂದಿ ವಜಾ: ಇಂಗ್ಲಿಷ್ ದೈನಿಕ ವರದಿ

ಹೆಚ್ ಎಸ್ ಬಿಸಿ ಬ್ಯಾಂಕಿಂಗ್ ಸಂಸ್ಥೆ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡುಬಂದ ಹಿನ್ನಲೆಯಲ್ಲಿ, ಸಂಸ್ಥೆ ನಷ್ಟದತ್ತ ಸಾಗುತ್ತಿದೆ ಎಂದು ಈ ಕ್ರಮಕ್ಕೆ ಮುಂದಾಗಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.  
ಹೆಚ್ ಎಸ್ ಬಿಸಿ ಚಿಹ್ನೆ(ಸಂಗ್ರಹ ಚಿತ್ರ)
ಹೆಚ್ ಎಸ್ ಬಿಸಿ ಚಿಹ್ನೆ(ಸಂಗ್ರಹ ಚಿತ್ರ)

ಹಾಂಕಾಂಗ್: ಹೆಚ್ ಎಸ್ ಬಿಸಿ ಬ್ಯಾಂಕಿಂಗ್ ಸಂಸ್ಥೆ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡುಬಂದ ಹಿನ್ನಲೆಯಲ್ಲಿ, ಸಂಸ್ಥೆ ನಷ್ಟದತ್ತ ಸಾಗುತ್ತಿದೆ ಎಂದು ಈ ಕ್ರಮಕ್ಕೆ ಮುಂದಾಗಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ. 


ಕುಸಿಯುತ್ತಿರುವ ಬಡ್ಡಿದರ, ದೀರ್ಘಾವಧಿಯಿಂದ ನಡೆಯುತ್ತಿರುವ ವ್ಯಾಪಾರ ಕದನ, ಬ್ರೆಕ್ಸಿಟ್, ವಿಪರೀತ ಖರ್ಚು ವೆಚ್ಚವನ್ನು ತಗ್ಗಿಸಲು ಉನ್ನತ ವೇತನ ಶ್ರೇಣಿ ಹೊಂದಿರುವವರಲ್ಲಿ ಹಲವರನ್ನು ವಜಾಗೊಳಿಸುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ ಎಂದು ವರದಿ ಹೇಳಿದೆ.
ಯುರೋಪ್ ನಲ್ಲಿ ಸಂಸ್ಥೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಿದ್ದು ಏಷ್ಯಾದ ಕೆಲವು ಭಾಗಗಳಲ್ಲಿ ಬ್ಯಾಂಕಿನ ಆದಾಯ ಇಳಿಮುಖವಾಗುತ್ತಿದೆ ಎಂದು ಹೇಳಿದೆ.


ಲಂಡನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೆಚ್ ಎಸ್ ಬಿಸಿ ಬ್ಯಾಂಕಿನ ಸಿಇಒ ಜಾನ್ ಫ್ಲಿಂಟ್ ಅವರು ಅಧಿಕಾರ ವಹಿಸಿ ಕೇವಲ 18 ತಿಂಗಳಲ್ಲಿ ಹುದ್ದೆ ತೊರೆಯುವ ಮೂಲಕ ಅಚ್ಚರಿಯನ್ನುಂಟುಮಾಡಿದ್ದರು. ಅವರ ರಾಜೀನಾಮೆಗೆ ಏನು ಕಾರಣ ಎಂದು ಹೇಳಲಿಲ್ಲ ಎಂದು ಸಂಸ್ಥೆ ನಂತರ ಪ್ರಕಟಣೆ ಹೊರಡಿಸಿತ್ತು. ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಸುಮಾರು 4 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಕೂಡ ಬಹಿರಂಗಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com