ಸಾಲ ಮರುಪಾವತಿ ಬಾಕಿ: ಸೀಪ್ಲೇನ್ ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳು

ಇದೇ ಮೊದಲ ಬಾರಿಗೆ ಸಾಲ ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಕ್ಕೆ ಬ್ಯಾಂಕ್ ಅಧಿಕಾರಿಗಳು ಸಮುದ್ರ ವಿಮಾನ(ಸೀಪ್ಲೇನ್)ವನ್ನು ಜಪ್ತಿ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಜಪ್ತಿ ಮಾಡಿದ ವಿಮಾನ
ಜಪ್ತಿ ಮಾಡಿದ ವಿಮಾನ

ಕೊಚ್ಚಿ: ಇದೇ ಮೊದಲ ಬಾರಿಗೆ ಸಾಲ ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಕ್ಕೆ ಬ್ಯಾಂಕ್ ಅಧಿಕಾರಿಗಳು ಸಮುದ್ರ ವಿಮಾನ(ಸೀಪ್ಲೇನ್)ವನ್ನು ಜಪ್ತಿ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಸುಮಾರು 6 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದ ಕೊಚ್ಚಿ ಮೂಲದ ಸೀಪ್ಲೇನ್ ಕಂಪನಿ ಸೀಬರ್ಡ್ ಸೀಪ್ಲೇನ್ ಲಿಮಿಟೆಡ್ ಗೆ ಸೇರಿದ ಸೀಪ್ಲೇನ್ ಅನ್ನು ಸಾಲ ನೀಡಿದ್ದ ಕೇರಳ ಮೂಲದ ಫೆಡರಲ್ ಬ್ಯಾಂಕ್ ಜಪ್ತಿ ಮಾಡಿದೆ.

2016ರ ಹೊಸ ದಿವಾಳಿತನ ತಡೆ ಕಾಯ್ದೆಯ ನಿಬಂಧನೆಗಳನ್ನು ಬಳಸಿ ಸಾಲದ ಬಾಕಿ ವಸೂಲಿ ಮಾಡಲು ವಿಮಾನವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ಫೆಡರಲ್ ಬ್ಯಾಂಕ್ ಹಿರಿಯ ಉಪಾಧ್ಯಕ್ಷ ಬಾಬು ಕೆಎ ಅವರು ತಿಳಿಸಿದ್ದಾರೆ. 

2015ರಲ್ಲಿ ಲಕ್ಷದ್ವೀಪದಲ್ಲಿ ತನ್ನ ಸೇವೆ ಆರಂಭಿಸಿದ ಸೀಬರ್ಡ್ ಸೀಪ್ಲೇನ್ ಈಗ ಸಾಲದ ಸುಳಿಗೆ ಸಿಲುಕಿದ್ದು, ಸಾಲ ನೀಡಿದ್ದ ಖಾಸಗಿ ಬ್ಯಾಂಕ್ ಈಗ ಅದರ ಸ್ವತ್ತುಗಳನ್ನು ಜಪ್ತಿ ಮಾಡುತ್ತಿದೆ. 

ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸೀಪ್ಲೇನ್ ಅನ್ನು ಬಾಬು ಕೆಎ ನೇತೃತ್ವದ ಬ್ಯಾಂಕ್ ಅಧಿಕಾರಿಗಳ ತಂಡ ಜಪ್ತಿ ಮಾಡಿದ್ದು, ಹೊಸ ಸೀಪ್ಲೇನ್ ಮಾರುಕಟ್ಟೆ ಮೌಲ್ಯ 13 ಕೋಟ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com