ಅಮೆಜಾನ್ ನಿಂದ ಆಹಾರ ಪೂರೈಕೆ ಆಪ್ ಆರಂಭ? ಸ್ವಿಗ್ಗಿ, ಝೊಮ್ಯಾಟೊಗೆ ಸೆಡ್ಡು 

ಈ ದೀಪಾವಳಿಗೆ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಆಹಾರ ಪೂರೈಸುವ ಆಪ್ ನ್ನು ಆರಂಭಿಸುವ ಯೋಜನೆಯಲ್ಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ದೀಪಾವಳಿಗೆ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಆಹಾರ ಪೂರೈಸುವ ಆಪ್ ನ್ನು ಆರಂಭಿಸುವ ಯೋಜನೆಯಲ್ಲಿದೆ. ಅಮೆಜಾನ್ ಆನ್ ಲೈನ್ ನಲ್ಲಿ ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಮತ್ತು ಹೊಟೇಲ್ ಮಾಲಿಕರಿಂದ ಅತ್ಯಂತ ಕಡಿಮೆ ಕಮಿಷನ್ ಗ್ರಾಹಕರ ಮೇಲೆ ಹೊರಿಸುವುದರಿಂದ ಆನ್ ಲೈನ್ ಮೂಲಕ ಆಹಾರ ಪೂರೈಸುವ ಕಂಪೆನಿಗಳಿಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆಯಿದೆ. 


ಅಮೆಜಾನ್ ತನ್ನ ವಿಸ್ತಾರವಾದ ಚಿಲ್ಲರೆ ಆಹಾರ ಪೂರೈಕೆ ಸಂಪರ್ಕಜಾಲವನ್ನು ಪ್ರಾಯೋಗಿಕ ಮಾದರಿಯಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಿದ್ದು ಮುಂದಿನ ದಿನಗಳಲ್ಲಿ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದು ಮೂಲಗಳು ಹೇಳುತ್ತವೆ.


ಈ ದೀಪಾವಳಿಗೆ ಅಮೆಜಾನ್ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹೊಟೇಲ್ ಮಾಲಿಕರು ಮತ್ತು ಅಮೆಜಾನ್ ಮಧ್ಯೆ ಮಾತುಕತೆ ನಡೆಯುತ್ತಿದೆ. ಅಮೆಜಾನ್ ಮೂಲಕ ರೆಸ್ಟೋರೆಂಟ್ ಮಾಲಿಕರು ಶೇಕಡಾ 6ರಿಂದ 10ರಷ್ಟು ಕಮಿಷನ್ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಸ್ವಿಗ್ಗಿ, ಝೊಮ್ಯಾಟೊ ಮತ್ತು ಉಬರ್ ಈಟ್ಸ್ ಗಳು ಶೇಕಡಾ 20ರಿಂದ 30ರಷ್ಟು ಕಮಿಷನ್ ಹೇರುತ್ತಿದ್ದು ಅಮೆಜಾನ್ ನಲ್ಲಿ ಗ್ರಾಹಕರ ಮೇಲೆ ದರ ಕಡಿಮೆಯಾಗಲಿದೆ. 


ಚಿಲ್ಲರೆ ಮತ್ತು ಆಹಾರ ಪೂರೈಕೆ ವಿಷಯದಲ್ಲಿ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ಈ ನಿಟ್ಟಿನಲ್ಲಿ ದೀಪಾವಳಿ ಸಮಯದಲ್ಲಿ ಹೊಸ ಉದ್ಯಮಕ್ಕೆ ಕೈಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಅಮೆಜಾನ್ ನ ಉನ್ನತ ಅಧಿಕಾರಿಯೊಬ್ಬರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com