ನಿಯಮ ಉಲ್ಲಂಘನೆ: ಲಕ್ಷ್ಮೀ ವಿಲಾಸ್, ಸಿಂಡಿಕೇಟ್ ಬ್ಯಾಂಕ್ ಗಳಿಗೆ ಆರ್ ಬಿಐ ದಂಡ

ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸಿದ ಹಿನ್ನಲೆಯಲ್ಲಿ ಖಾಸಗಿ ಲಕ್ಷ್ಮೀ ನಿಲಾಸ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳಿಗೆ ದುಬಾರಿ ದಂಡ ವಿಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸಿದ ಹಿನ್ನಲೆಯಲ್ಲಿ ಖಾಸಗಿ ಲಕ್ಷ್ಮೀ ನಿಲಾಸ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳಿಗೆ ದುಬಾರಿ ದಂಡ ವಿಧಿಸಲಾಗಿದೆ.

ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಲಕ್ಷ್ಮಿ ವಿಲಾಸ ಬ್ಯಾಂಕ್​ಗೆ 1 ಕೋಟಿ ರೂಪಾಯಿ ಮತ್ತು ಸಿಂಡಿಕೇಟ್ ಬ್ಯಾಂಕ್​ಗೆ 75 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಮೂಲಗಳ ಪ್ರಕಾರ ಇನ್ ಕಮ್ ರೆಕಗ್ನಿಷನ್​ ಆ್ಯಂಡ್​ ಅಸೆಟ್​ ಕ್ಲಾಸಿಫಿಕೇಷನ್​(ಐಆರ್​ಎಸಿ) ನಿಯಮಾವಳಿ ಪ್ರಕಾರ ದಾಖಲೆಗಳನ್ನು ಸಲ್ಲಿಸದ ಲಕ್ಷ್ಮಿ ವಿಲಾಸ ಬ್ಯಾಂಕ್​ಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಅಂತೆಯೇ ಬ್ಯಾಂಕಿಂಗ್ ರೆಗುಲೇಷನ್​ ಆ್ಯಕ್ಟ್​ 1949ರ ಸೆಕ್ಷನ್​ 46(4)(i) ಮತ್ತು 51(1) ಮತ್ತು ಸೆಕ್ಷನ್​ 47A(1)(c) ಪ್ರಕಾರ “ಫ್ರಾಡ್ಸ್​ ಕ್ಲಾಸಿಫಿಕೇಷನ್​ ಆ್ಯಂಡ್ ರಿಪೋರ್ಟಿಂಗ್​ ಆ್ಯಂಡ್​ ಹೌಸಿಂಗ್ ಸೆಕ್ಟರ್​” ಅಡಿಯಲ್ಲಿ ನವೋನ್ವೇಷಣೆಯ ಮನೆ ಸಾಲ ವಿತರಣೆಗೆ ಸಂಬಂಧಿಸಿ ಮಣಿಪಾಲ ಮೂಲದ ಸಿಂಡಿಕೇಟ್​ ಬ್ಯಾಂಕ್​ಗೆ 75 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಇನ್ನು ಬ್ಯಾಂಕಿಂಗ್ ರೆಗ್ಯುಲೇಷನ್​ ಆ್ಯಕ್ಟ್​ 1949ರ ಸೆಕ್ಷನ್​ 46(4)(i) ಮತ್ತು ಸೆಕ್ಷನ್​ 47A(1)(c) ಪ್ರಕಾರ ಈ ರೀತಿ ದಂಡ ವಿಧಿಸುವ ಅಧಿಕಾರ ಆರ್​ಬಿಐಗೆ ಇದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 31, 2017ರಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಆರ್ಥಿಕ ಪರಿಸ್ಥಿತಿ ಬಗ್ಗೆ ಕಾನೂನಿನ ಪ್ರಕಾರ ಪರಿಶೀಲನೆ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com