ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ವಿತ್ತೀಯ ನೀತಿ ಬಗ್ಗೆ ಚಿಂತಿಸಿ ಸಮಯ ಹಾಳು ಮಾಡಬೇಡಿ: ಅಭಿಜಿತ್ ಬ್ಯಾನರ್ಜಿ 

ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಹಿಂದಿನಿಂದಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಲೇ ಬಂದಿದ್ದಾರೆ. 
ಅಭಿಜಿತ್ ಬ್ಯಾನರ್ಜಿ
ಅಭಿಜಿತ್ ಬ್ಯಾನರ್ಜಿ

ನವದೆಹಲಿ: ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಹಿಂದಿನಿಂದಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಲೇ ಬಂದಿದ್ದಾರೆ. ಪ್ರಶಸ್ತಿ ಗಳಿಸಿರುವ ಈ ಸಮಯದಲ್ಲಿ ಅವರು ನರೇಂದ್ರ ಮೋದಿ ಸರ್ಕಾರಕ್ಕೆ ಒಂದು ಸಲಹೆ ನೀಡಿದ್ದು, ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಕೈಮೀರಿ ಹೋಗಿರುವುದರಿಂದ ಹಣಕಾಸು ನೀತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಸಮಯ ಹಾಳು ಮಾಡಬೇಡಿ, ಬದಲಾಗಿ, ಮುಳುಗುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು ಬೇಡಿಕೆಗಳನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.


ನಿನ್ನೆ ಅಮೆರಿಕಾದ ಕೇಂಬ್ರಿಡ್ಜ್‌ನಲ್ಲಿರುವ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶೇಷವಾಗಿ ಬಡವರ ಕೈಯಲ್ಲಿ ಹಣ ಓಡಾಡುವಂತೆ ಮಾಡಬೇಕಾಗಿರುವುದು ಸದ್ಯದ ಆರ್ಥಿಕ ಪರಿಸ್ಥಿತಿಯ ಅವಶ್ಯಕತೆಯಾಗಿದೆ. 


ನನ್ನ ಪ್ರಕಾರ ಭಾರತದ ಆರ್ಥಿಕತೆ ವೇಗವಾಗಿ ಹದಗೆಟ್ಟು ಹೋಗಿದೆ. ಇತ್ತೀಚಿನ ಎನ್ಎಸ್ಎಸ್ಒ ಸಮೀಕ್ಷೆಯನ್ನು ಪ್ರಸ್ತಾಪಿಸಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆ ವಸ್ತುಗಳ ಬೇಡಿಕೆ ತೀವ್ರ ಕುಸಿದಿದೆ. ಇದು ಜಾಗತಿಕವಾಗಿ ಸಹ ಎಚ್ಚರಿಕೆ ಸೂಚನೆಯಾಗಿದೆ ಎಂದರು.


ಬ್ಯಾನರ್ಜಿ ಹೊರತುಪಡಿಸಿ ಇತರ ಕೆಲ ಪ್ರಮುಖ ಆರ್ಥಿಕ ತಜ್ಞರು ಸಹ ಭಾರತದ ಆರ್ಥಿಕತೆ ಕುಸಿದುಹೋಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣಕಾಸು ಕೊರತೆ ಗುರಿಯನ್ನು ಸಡಿಲಗೊಳಿಸಿ ಭಾರತ ಸರ್ಕಾರ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಮತ್ತು ಬೇಡಿಕೆಗಳನ್ನು ಪೂರೈಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಮಾಜಿ ಸದಸ್ಯ ಪ್ರೊ ಎಂ ಗೋವಿಂದ ರಾವ್ ಮಾತನಾಡುತ್ತಾ, ಭಾರತದಲ್ಲಿ ಆರ್ಥಿಕ ಪುನರುಜ್ಜೀವನಕ್ಕೆ ಹಣಕಾಸು ಗುರಿಗಳನ್ನು ಸದ್ಯ ದೂರವಿಟ್ಟು ಪುನರುಜ್ಜೀವನದತ್ತ ಗಮನ ಹರಿಸಬೇಕು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com